ಕೊಡಿಯಾಲ್‌ಬೈಲ್: ಕಾಂಗ್ರೆಸ್ ಸಮಿತಿ ಸಭೆ

ಮಂಗಳೂರು, ನ.10: ಕೊಡಿಯಾಲ್‌ಬೈಲ್ 30ನೆ ವಾರ್ಡಿನ ಕಾಂಗ್ರೆಸ್ ಸಮಿತಿ ಸಭೆ ಮತ್ತು ವಾರ್ಡ್‌ನ ಮಾಜಿ ಅಧ್ಯಕ್ಷ ದಿ. ದೇವಪ್ಪಸುವರ್ಣರವರ ‘ನುಡಿ-ನಮನ’ ಕಾರ್ಯಕ್ರಮ ನಗರದ ಬಳ್ಳಾಲ್‌ಬಾಗ್‌ನ ಸಂದೇಶ್ ಹಾಲ್‌ನಲ್ಲಿ ಇತ್ತೀಚೆಗೆ ನಡೆಯಿತು.
ಶಾಸಕ ಜೆ.ಆರ್. ಲೋಬೊ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮನಪಾ ನಾಮನಿರ್ದೇಶಿತ ಸದಸ್ಯ ಪ್ರೇಮನಾಥ್ ಪಿ.ಬಿ ಹಾಗೂ 29ನೆ ಕಂಬ್ಳ ವಾರ್ಡಿನ ನಾಗೇಶ್ ಭಂಡಾರಿ ಮತ್ತು ಹಿರಿಯ ಕಾರ್ಯಕರ್ತ ಫ್ರಾನ್ಸಿಸ್ ಸಿರಿಲ್ ಡಿಸೋಜ ಹಾಗೂ ಸ್ಟಾನಿ ಡಿಸೋಜರನ್ನು ಸನ್ಮಾನಿಸಲಾಯಿತು.
ಈ ಸಂದರ್ಭ ನೂತನ ಗೌರವಾಧ್ಯಕ್ಷ ರವಿಕುಮಾರ್, ಅಧ್ಯಕ್ಷ ರಘುರಾಜ್ ಕದ್ರಿ, ಉಪಾಧ್ಯಕ್ಷ ಅರುಣ್ ಕದ್ರಿ, ಪ್ರಧಾನ ಕಾರ್ಯದರ್ಶಿ ದೇವಿಪ್ರಸಾದ್ ಕದ್ರಿ, ಜೊತೆ ಕಾರ್ಯದರ್ಶಿ ಪ್ರತಾಪ್ ಸಾಲ್ಯಾನ್ ಕದ್ರಿ, ಪ್ರಜ್ವಲ್ ದೇವಾಡಿಗ, ಕೋಶಾಧಿಕಾರಿ ಭರತ್ ಬಿಜೈ, ವಾರ್ಡ್‌ನ ಪ.ಜಾ/ಪ.ಪಂ ಘಟಕದ ಅಧ್ಯಕ್ಷ ದಿನೇಶ್ ಭಾರತಿನಗರ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ವೇಗಸ್, ಕಾನೂನು ಮತ್ತು ಮಾಹಿತಿ ತಂತ್ರಜ್ಞಾನ ಘಟಕದ ಅಧ್ಯಕ್ಷ ಪ್ರತಾಪ್ ಸಾಲ್ಯಾನ್, ಕಿಸಾನ್ ಘಟಕದ ಅಧ್ಯಕ್ಷ ಹೇಮಂತ್ ಕದ್ರಿ, ಯುವ ಕಾಂಗ್ರೆಸ್‌ನ ಅಧ್ಯಕ್ಷ ಪ್ರಥ್ವಿರಾಜ್, ಮಹಿಳಾ ಘಟಕದ ಅಧ್ಯಕ್ಷೆ ಮಮತಾ ಶೆಟ್ಟಿ, ಉಪಾಧ್ಯಕ್ಷೆ ಕವಿತಾ, ಪ್ರಧಾನ ಕಾರ್ಯದರ್ಶಿ ವಸಂತಿ ಪದಗ್ರಹಣ ಮಾಡಿದರು.
ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ, ಮನಪಾದ ಮುಖ್ಯ ಸಚೇತಕ ಶಶಿಧರ್ ಹೆಗ್ಡೆ, ಕಾರ್ಪೋರೇಟರ್ ಪ್ರಕಾಶ್ ಬಿ. ಸಾಲ್ಯಾನ್, ನಗರ ಬ್ಲಾಕ್‌ನ ಅಧ್ಯಕ್ಷ ವಿಶ್ವಾಸ್‌ಕುಮಾರ್ ದಾಸ್, ಯುವ ಕಾಂಗ್ರೆಸ್‌ನ ಅಧ್ಯಕ್ಷ ಮಿಥುನ್ ರೈ, ಸುರೇಶ್ ಬಳ್ಳಾಲ್, ಕಿಸಾನ್ ಘಟಕದ ಅಧ್ಯಕ್ಷ ನೀರಜ್ ಪಾಲ್, ಬ್ಲಾಕ್‌ನ ಮಹಿಳಾ ಅಧ್ಯಕ್ಷೆ ಶಶಿಕಲಾ, ಕಾರ್ಪೋರೇಟರ್‌ಗಳಾದ ರಜನೀಶ್, ಮುಹಮ್ಮದ್, ಅಬ್ದುಲ್ಲತೀಫ್, ಕೆಎಸ್ಸಾರ್ಟಿಸಿ ನಿರ್ದೇಶಕ ಟಿ.ಕೆ ಸುಧೀರ್, ಎನ್‌ಎಸ್‌ಯುಐ ಅಧ್ಯಕ್ಷ ಆಶೀತ್ ಪಿರೇರಾ ಉಪಸ್ಥಿತರಿದ್ದರು.







