ಮೊದಲ ಟೆಸ್ಟ್ ; ಇಂಗ್ಲೆಂಡ್ 537ಕ್ಕೆ ಆಲೌಟ್

ಮುಹಮ್ಮದ್ ಶಮಿ ಎಸೆತದಲ್ಲಿ ಮೊಯಿನ್ ಅಲಿ ಬೌಲ್ಡ್
ರಾಜ್ ಕೋಟ್, ನ.10: ಇಲ್ಲಿ ನಡೆಯುತ್ತಿರುವ ಮೊದಲ ಕ್ರಿಕೆಟ್ ಟೆಸ್ಟ್ ನಲ್ಲಿ ಭಾರತದ ವಿರುದ್ಧ ಇಂಗ್ಲೆಂಡ್ ಮೊದಲ ಇನಿಂಗ್ಸ್ ನಲ್ಲಿ 537 ರನ್ ಗಳಿಗೆ ಆಲೌಟಾಗಿದೆ.
ಟೆಸ್ಟ್ ನ ಎರಡನೆ ದಿನವಾಗಿರುವ ಗುರುವಾರ ಇಂಗ್ಲೆಂಡ್ ದಾಂಡಿಗರಾದ ಮೊಯಿನ್ ಅಲಿ(117), ಬೆನ್ ಸ್ಟೋಕ್ಸ್ (128) ಶತಕ ದಾಖಲಿಸಿದ್ದಾರೆ. ಇದರೊಂದಿಗೆ ಇಂಗ್ಲೆಂಡ್ ತಂಡದ ಮೂವರು ಶತಕ ದಾಖಲಿಸಿದ್ದಾರೆ. ಬುಧವಾರ ಜೋ ರೂಟ್(124) ಶತಕ ದಾಖಲಿಸಿದ್ದರು.
ಬೈರ್ ಸ್ಟೋವ್ (46) ಮತ್ತು ಅನ್ಸಾರಿ(32) ಎರಡಂಕೆಯ ಕೊಡುಗೆ ನೀಡಿದರು. ಭಾರತದ ರವೀಂದ್ರ ಜಡೇಜ 86ಕ್ಕೆ 3, ಮುಹಮ್ಮದ್ ಶಮಿ, ಉಮೇಶ್ ಯಾದವ್, ಆರ್ ಅಶ್ವಿನ್ ತಲಾ 2 ವಿಕೆಟ್ ಮತ್ತು ಅಮಿತ್ ಮಿಶ್ರಾ 1 ವಿಕೆಟ್ ಪಡೆದರು.
Next Story





