ಪೊಲೀಸಧಿಕಾರಿಯ ಕಾರು, ಬೈಕನ್ನು ಸುಟ್ಟು ಹಾಕಿದ ಕಿಡಿಗೇಡಿಗಳು

ಪುನ್ನಯೂರ್‌ಕುಳಂ,ನ. 10: ಸ್ಪೆಷಲ್ ಬ್ರಾಂಚ್ ಅಧಿಕಾರಿಯ ಮನೆಯ ಮುಂದೆ ನಿಲ್ಲಿಸಿದ್ದ ಕಾರು ಬೈಕ್‌ಗಳನ್ನು ಸುಟ್ಟುಹಾಕಿರುವ ಘಟನೆ ವರದಿಯಾಗಿದೆ. ವಡಕ್ಕೋಡ್ ಪೊಲೀಸ್ ಠಾಣೆಯ ವ್ಯಾಪ್ತಿಯ ಸ್ಟೇಟ್ ಸ್ಪೆಷಲ್ ಬ್ರಾಂಚ್ ಎಎಸ್ಸೈ ಪುನ್ನಯೂರ್‌ಕ್ಕುಳಂ ಮಾವಿನ್ ಚುವಡ್ ಎಂಬಲ್ಲಿನ ವೈಶ್ಯಂ ಮನೆಯ ಅಶ್ರಫ್ ಅವರ ವಾಹನಗಳನ್ನು ಬೆಂಕಿ ಹಚ್ಚಿ ಸುಟ್ಟುಹಾಕಿದ ಘಟನೆ ಬುಧವಾರ ರಾತ್ರೆ 12 ಗಂಟೆಯ ನಂತರ ನಡೆದಿದೆ.
ಮನೆಯ ಮುಂಭಾಗದಲ್ಲಿ ಕಾರಿನ ಪಕ್ಕದಲ್ಲೇ ಬೈಕ್ ನಿಲ್ಲಿಸಲಾಗಿತ್ತು. ಬೆಂಕಿ ಉರಿಯುತ್ತಿರುವುದು ಅಶ್ರಫ್ ಮತ್ತು ಸ್ಥಳೀಯ ನಿವಾಸಿಗಳಿಗೆ ನಂತರ ಗೊತ್ತಾಗಿತ್ತು. ಕಾರಿನ ಸಮೀಪದಿಂದ ಅರ್ಧಸುಟ್ಟ ಕಟ್ಟಿಗೆ ಇತ್ತು. ಕಿಡಿಗೇಡಿಗಳು ಅದನ್ನು ಬೆಂಕಿ ಹಚ್ಚಲಿಕ್ಕಾಗಿ ಉಪಯೋಗಿಸಿದ್ದಾರೆಂದು ಅಂದಾಜಿಸಲಾಗಿದೆ. ಏಳು ತಿಂಗಳ ಹಿಂದೆಯಷ್ಟೆ ಅಶ್ರಫ್ ಈ ಕಾರನ್ನು ಖರೀದಿಸಿದ್ದರು. ಕಾರು,ಬೈಕಿಗೆ ಬೆಂಕಿಯಿಟ್ಟವರ ಕುರಿತು ಈವರೆಗೂ ಮಾಹಿತಿ ಲಭ್ಯವಾಗಿಲ್ಲ ಎಂದು ವರದಿ ತಿಳಿಸಿದೆ.
Next Story





