ಜಿಶಾ ತಂದೆ ಸಲ್ಲಿಸಿದ ಮರುತನಿಖೆ ಅರ್ಜಿ ವಜಾ

ಕೊಚ್ಚಿ,ನ. 10: ಜಿಶಾ ಕೊಲೆ ಪ್ರಕರಣದ ಮರುತನಿಖೆಗೆ ಆಗ್ರಹಿಸಿ ಜಿಶಾರ ತಂದೆ ಪಾಪ್ಪು ಸಲ್ಲಿಸಿದ ಅರ್ಜಿಯನ್ನು ಎರ್ನಾಕುಲಂ ಸೆಶನ್ಸ್ ಕೋರ್ಟು ತಳ್ಳಿಹಾಕಿದೆ. ಇದೇ ವೇಳೆ ಕರವಲ್ಲ ಮತ್ತು ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕೆಂದು ಆಗ್ರಹಿಸಿ ಹೈಕೋರ್ಟಿಗೆ ಅರ್ಜಿ ಸಲ್ಲಿಸುವುದಾಗಿ ಪಾಪ್ಪು ತಿಳಿಸಿದ್ದಾರೆ.
ಜಿಶಾ ಕೊಲೆಯ ತನಿಖೆಯಲ್ಲಿ ಲೋಪವಾಗಿದೆ. ಕೊಲೆಕೃತ್ಯದಲ್ಲಿ ಒಬ್ಬನಲ್ಲ ಹೆಚ್ಚು ಮಂದಿ ಪಾಲ್ಗೊಂಡಿದ್ದಾರೆ ಎಂದು ಆರೋಪಿಸಿ ಮರು ತನಿಖೆನಡೆಸುವಂತೆ ಆಗ್ರಹಿಸಿ ಅರ್ಜಿ ಸಲ್ಲಿಸಿದ್ದರು. ಪಾಪ್ಪುರ ಅರ್ಜಿಯ ಆರೋಪಗಳನ್ನು ಪೊಲೀಸ್ ಈ ಹಿಂದೆಯೇ ತನಿಖೆ ನಡೆಸಿದೆ ಎಂದು ಕೋರ್ಟು ಬೆಟ್ಟು ಮಾಡಿದೆ. ಆರೋಪಿ ಅಮೀರ್ ವಿರುದ್ಧ ಆರೋಪ ಹೊರಿಸಿ ತನಿಖೆ ಆರಂಭಗೊಂಡಿದೆ. ಈ ಹಂತದಲ್ಲಿ ಮರು ತನಿಖೆಗೆ ಆದೇಶಿಸಲು ಸಾಧ್ಯವಿಲ್ಲ ಎಂದು ಸೆಶನ್ಸ್ ಕೋರ್ಟು ತಿಳಿಸಿದೆ.
ಮರುತನಿಖೆಗೆ ಆದೇಶ ನೀಡಿದರೆ ಪ್ರಕರಣದ ವಿಚಾರಣಾ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಬೇಕಾಗುತ್ತದೆ. ಪೊಲೀಸರು ಆಗ್ರಹಿಸಿದರೆ ಮಾತ್ರವೇ ಮರುತನಿಖೆ ವಿಚಾರವನ್ನು ಪರಿಗಣಿಸಬಹುದು. ಮೂರನೆ ಕಕ್ಷಿಗೆ ಇದರಲ್ಲಿ ಹಸ್ತಕ್ಷೇಪ ನಡೆಸುವ ಅವಕಾಶವಿಲ್ಲ ಎಂದು ಕೋರ್ಟು ಸ್ಪಷ್ಟ ಪಡಿಸಿದೆ. ಜಿಶಾ ಕೊಲೆಪ್ರಕರಣದಲ್ಲಿ ಸಿಬಿಐ ತನಿಖೆ ಆಗ್ರಹಿಸಿ ಪ್ರತಿಭಟನೆಗಿಳಿಯಲು ಆಕ್ಷನ್ ಕೌನ್ಸಿಲ್ ಎಂಬ ಸಂಘಟನೆ ತೀರ್ಮಾನಿಸಿದೆ. ಕೋರ್ಟು ಅಮೀರ್‌ನ ಜಾಮೀನು ಅರ್ಜಿಯನ್ನು ಈ ತಿಂಗಳ ಹದಿನೆಂಟನೆ ತಾರೀಕಿಗೆ ಮುಂದೂಡಿದೆ ಎಂದು ವರದಿ ತಿಳಿಸಿದೆ.







