ಹಿಂದೂ ಮಹಾಸಭಾ ನಾಯಕರ ಪ್ರಕಾರ ಟ್ರಂಪ್ ಏನು ಮಾಡುತ್ತಾರೆ ಗೊತ್ತೇ ?

ಹೊಸದಿಲ್ಲಿ,ನ.10 : ಅಮೆರಿಕಾದ ಅಧ್ಯಕ್ಷೀಯ ಚುನಾವಣೆಯ ಸಂದರ್ಭ ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರನ್ನು ಬೆಂಬಲಿಸಿದ್ದ ಬಲಪಂಥೀಯ ಸಂಘಟನೆ ಅಖಿಲ ಭಾರತ ಹಿಂದೂ ಮಹಾಸಭಾಇದೀಗ ತನ್ನ ಹೊಸ ವರಸೆ ಪ್ರಕಟಿಸಿದೆ. ಅಮೆರಿಕಾದ ಅಧ್ಯಕ್ಷರಾಗಿ ಸದ್ಯದಲ್ಲಿಯೇ ಅಧಿಕಾರ ವಹಿಸಲಿರುವ ಟ್ರಂಪ್ ಅವರುಹಿಂದೂ ಸಂಸ್ಕೃತಿಯನ್ನು ಆಲಂಗಿಸುವರು ಹಾಗೂ ಗೋಮಾಂಸ ತಿನ್ನುವುದನ್ನು ತ್ಯಜಿಸುವರೆಂಬ ಆಶಾವಾದವನ್ನು ಅವರು ವ್ಯಕ್ತಪಡಿಸಿದ್ದಾರೆ.
‘‘ಟ್ರಂಪ್ ಅವರು ಗೋಮಾಂಸ ತಿನ್ನುತ್ತಾರೆಂದು ತಿಳಿಯಿತು.ಇದೀಗ ಅವರಿಗೆ ಹಿಂದೂ ಸಂಸ್ಕೃತಿಯ ಪರಿಚಯವಿರುವುದರಿಂದಅವರು ಅದನ್ನು ಆಲಂಗಿಸಿದಲ್ಲಿ ಅವರಲ್ಲಿರುವ ಎಲ್ಲಾ ಕೆಟ್ಟ ಹವ್ಯಾಸಗಳೂ ದೂರವಾಗುವವು’’ ಎಂದು ಸಭಾದ ರಾಷ್ಟ್ರೀಯ ಅಧ್ಯಕ್ಷಚಂದ್ರಪ್ರಕಾಶ್ ಕೌಶಿಕ್ ಹೇಳಿದ್ದಾರೆ.
ಸಂಪೂರ್ಣ ಹಿಂದೂ ಸಮುದಾಯ ಟ್ರಂಪ್ ಬೆಂಬಲಿಸಿದ್ದರಿಂದಅವರು ಹಿಲರಿ ಕ್ಲಿಂಟನ್ ವಿರುದ್ಧ ಗೆಲುವು ಸಾಧಿಸುತ್ತಾರೆಂದುಮೊದಲಿನಿಂದಲೂ ಖಚಿತವಾಗಿತ್ತು’’ ಎಂದು ಕೌಶಿಕ್ ತಿಳಿಸಿದ್ದಾರೆ. ಹಿಂದೂ ಮಹಾಸಭಾ ನಾಯಕರು ಟ್ರಂಪ್ ಅವರ ವಿಜಯಕ್ಕಾಗಿ ಹವನಗಳನ್ನೂ ನಡೆಸಿದ್ದರೆಂಬುದನ್ನು ಇಲ್ಲಿ ಸ್ಮರಿಸಬಹುದು.
ತಾವು ಅಯ್ಯೋಧ್ಯೆಗೆ ಹೋಗಿ ಟ್ರಂಪ್ ಗೆಲುವಿಗಾಗಿ ಪ್ರಾರ್ಥಿಸಿದ್ದಾಗಿಕೌಶಿಕ್ ಹೇಳಿದ್ದಾರಲ್ಲದೆ ‘‘ಟ್ರಂಪ್ ಅವರೇ ಉಗ್ರವಾದದ ವಿರುದ್ಧಹೋರಾಡುವ ವಿಶ್ವ ಮಟ್ಟದ ಏಕೈಕ ರಾಜಕಾರಣಿಯಾಗಿದ್ದಾರೆ. ಯಾರು ಉಗ್ರವಾದದ ವಿರುದ್ಧ ಹೋರಾಡುತ್ತಾರೋ ಅವರನ್ನು ನಾವು ಬೆಂಬಲಿಸುತ್ತೇವೆ,’’ ಎಂದು ಕೌಶಿಕ್ ವಿವರಿಸಿದ್ದಾರೆ.
ವಿದೇಶೀಯರಿಗೆ ಉದ್ಯೋಗ ಒದಗಿಸುವುದರ ವಿರುದ್ಧ ಟ್ರಂಪ್ ನಿಲುವಿಗೆ ಪ್ರತಿಕ್ರಿಯಿಸಿದ ಅವರು ‘‘ಅದು ಅವರ ಆಂತರಿಕ ವಿಚಾರ. ನಮಗೆ ಅವರ ಉಗ್ರವಾದದ ವಿರುದ್ಧದ ಧೋರಣೆಯ ಬಗ್ಗೆ ಸಂತಸವಿದೆ,’’ ಎಂದು ಹೇಳಿದರು.







