ಪಂಜಾಬ್ ನ ಕಾಂಗ್ರೆಸ್ ಶಾಸಕರ ಸಾಮೂಹಿಕ ರಾಜೀನಾಮೆ
ಸಟ್ಲೆಜ್-ಯಮುನಾ ನದಿಗಳ ನೀರು ಹಂಚಿಕೆಗೆ ಸಂಬಂಧಿಸಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪು

ಹೊಸದಿಲ್ಲಿ, ನ.10: ಸಟ್ಲೆಜ್-ಯಮುನಾ ನದಿಗಳ ನೀರು ಹಂಚಿಕೆಗೆ ಸಂಬಂಧಿಸಿ ಸುಪ್ರೀಂಕೋರ್ಟ್ ಗುರುವಾರ ನೀಡಿರುವ ತೀರ್ಪು ಹಿನ್ನೆಲೆಯಲ್ಲಿ ಪಂಜಾಬ್ ನ ವಿಪಕ್ಷ ಕಾಂಗ್ರೆಸ್ ಶಾಸಕರು, ಕಾಂಗ್ರೆಸ್ ರಾಜ್ಯಾಧ್ಯಕ್ಷ ಅಮೃತಸರ ಲೋಕಸಭಾ ಕ್ಷೇತ್ರದ ಸದಸ್ಯ ಅಮರಿಂದರ್ ಸಿಂಗ್ ರಾಜೀನಾಮೆ ನೀಡಿದ್ದಾರೆ.
ಪಂಜಾಬ್ ಸರಕಾರ ನೆರೆಯ ಹರ್ಯಾಣದೊಂದಿಗೆ ನೀರು ಹಂಚಿಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಗುರುವಾರ ತೀರ್ಪು ನೀಡಿತ್ತು.
ಸಟ್ಲೆಜ್-ಯಮುನಾ ನದಿಗಳನ್ನು ಸಂಪರ್ಕಿಸುವ ಕಾಲುವೆ ನಿರ್ಮಾಣ ವಿವಾದ ಪ್ರಕರಣದ ವಿಚಾರಣೆ ನಡೆಸಿದ ಐವರು ನ್ಯಾಯಾಧೀಶರನ್ನೊಳಗೊಂಡ ಸಾಂವಿಧಾನಿಕ ಪೀಠ, ನೀರು ಕೊಡುವುದಿಲ್ಲ ಎಂದು ಹೇಳುವುದು ಕಾನೂನು ಬಾಹಿರವಾಗಿದ್ದು, ಕಾಲುವೆ ಕಾಮಮಗಾರಿಯನ್ನು ಪೂರ್ಣಗೊಳಿಸುವಂತೆ ಸೂಚಿಸಿದೆ.
ಹರ್ಯಾಣ ರಾಜ್ಯಕ್ಕೆ ನೀರು ನೀಡಲು ರಾಜ್ಯದಲ್ಲಿ ಸಾಕಷ್ಟು ನೀರು ಇಲ್ಲ ಎಂದು ಪಂಜಾಬ್ ಹೇಳಿತ್ತು. ಇದರ ವಿರುದ್ಧ ಹರ್ಯಾಣ ಸರಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು
Next Story





