ಎಸ್‌ಇಡಿಸಿ ಸ್ಫಟಿಕ ಸಂಭ್ರಮ ಪ್ರಯುಕ್ತ ಜಾಥಾ

ಮಂಗಳೂರು, ನ. 10: ಎಸ್‌ಜೆಎಂ ಕಾಪು ರೇಂಜ್ ವತಿಯಿಂದ ಎಸ್‌ಇಡಿಸಿ ಸ್ಫಟಿಕ ಸಂಭ್ರಮದ ಪ್ರಯುಕ್ತ ರೇಂಜ್ ಕಾನ್ಫರೆನ್ಸ್ ಹಾಗೂ ಎಸ್‌ಬಿಎಸ್ ಬಾಲ ಮುನ್ನಡೆ ಕಾಲ್ನಡಿಗೆ ಜಾಥಾ ಕಾಪು ಪೇಟೆಯಲ್ಲಿ ನಡೆಯಿತು.
ಅಧ್ಯಕ್ಷತೆಯನ್ನು ರೇಂಜ್ ಅಧ್ಯಕ್ಷ ಕೆ.ಪಿ.ಅಬ್ದುರ್ರಝಾಕ್ ಅಲ್‌ಖಾಸಿಮಿ ವಹಿಸಿದ್ದರು. ಎಸ್‌ಇಡಿಸಿ ಕೋಶಾಧಿಕಾರಿ ಅಬ್ದುರ್ರಶೀದ್ ಸಖಾಫಿ ಉದ್ಘಾಟನೆ ನೆರವೇರಿಸಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಕರಂದಾಡಿ ಶ್ರೀ ರಾಮ ಶಾಲೆಯ ಮುಖ್ಯ ಶಿಕ್ಷಕ ನಿರ್ಮಲ್ ಕುಮಾರ್ ಹೆಗ್ಡೆ ಹಾಗೂ ಪಾದೂರು ಸಿ.ಎಸ್.ಐ. ಚರ್ಚ್‌ನ ಧರ್ಮಗುರು ಫಾ.ಅಮೃತ್‌ರಾಜ್ ಖೋಡೆ ಭಾಗವಹಿಸಿದ್ದರು. ಪ್ರಾಂಶುಪಾಲ ಹಾಫಿಝ್ ಸುಫ್ಯಾನ್ ಸಖಾಫಿ, ಕಾಪು ಉಸ್ತಾದ್ ಪೊಲಿಪು ಜಾಮಿಯಾ ಮಸ್ಜಿದ್‌ನ ಅಧ್ಯಕ್ಷ ಎಚ್.ಮುಹಮ್ಮದ್, ಎಸೆಸೆಫ್ ಡಿವಿಜನ್ ಅಧ್ಯಕ್ಷ ಅಹ್ಮದ್ ಶಬೀರ್ ಉಪಸ್ಥಿತರಿದ್ದರು.
ಖತೀಬ್ ಮುಹಮ್ಮದ್ ಇರ್ಷಾದ್ ಸ್ವಾಗತಿಸಿದರು. ಇಬ್ರಾಹೀಂ ಸಖಾಫಿ ವಂದಿಸಿದರು. ರಖೀಬ್ ಕನ್ನಂಗಾರ್ ಕಾರ್ಯಕ್ರಮ ನಿರೂಪಿಸಿದರು.
Next Story





