ಕಳ್ಳರಲ್ಲೂ ಪ್ರಾಮಾಣಿಕತೆ ತಂದ ನೋಟು ರದ್ದತಿ ! ಏನಾಯಿತು ನೋಡಿ

ನೋಯ್ಡ , ನ. 10 : ಇಬ್ಬರು ಬೈಕ್ ಸವಾರ ಕಳ್ಳರು ಕಾರ್ಮಿಕನೊಬ್ಬನಿಂದ 1,500 ದೋಚಿ ಬಳಿಕ ಅದನ್ನು ತಂದು ಆತನಿಗೇ ಮರಳಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ ! ಆದರೆ ಹಾಗೆ ಹಿಂದಿರುಗಿಸುವಾಗ ಆತನಿಗೆ ಸರಿಯಾಗಿ ನಾಲ್ಕು ಬಾರಿಸಿದ್ದಾರೆ ! ಕಾರಣ , ಆತನ ಬಳಿ ಇದ್ದದ್ದು ಹಳೆಯ 500ರೂ. ಯ ಮೂರು ನೋಟುಗಳು .
ಇಲ್ಲಿನ ಗ್ರೇಟರ್ ನೋಯ್ಡದಲ್ಲಿ ಕೆಲಸ ಮಾಡುವ ವಿಕಾಸ್ ಕುಮಾರ್ ಕಟ್ಟಡ ನಿರ್ಮಾಣ ಸೈಟೊಂದರಲ್ಲಿ ಕೆಲಸ ಮುಗಿಸಿ ರಾತ್ರಿ 11 ರ ಸುಮಾರಿಗೆ ಬಸ್ ಸ್ಟ್ಯಾಂಡ್ ಕಡೆ ಹೋಗುತ್ತಿದ್ದರು. ಆಗ ಬೈಕ್ ನಲ್ಲಿ ಬಂದ ಇಬ್ಬರು ಅವರ ಕೈಯಿಂದ ಪರ್ಸನ್ನು ಎಳೆದು ತೆಗೆದು ಕೊಂಡು ಹೋಗಿದ್ದಾರೆ. ಇದರಿಂದ ಕಂಗೆಟ್ಟು ಏನು ಮಾಡುವುದೆಂದು ವಿಕಾಸ್ ಯೋಚಿಸುತ್ತಿರುವಾಗಲೇ ಆ ಇಬ್ಬರು ಹಿಂದುರುಗಿ ಬಂದಿದ್ದಾರೆ. ವಿಕಾಸ್ ಅವರ ಪರ್ಸನ್ನು ಅವರ ಮುಖಕ್ಕೆ ಎಸೆದ ಆ ಇಬ್ಬರು ನಿನಗೆ 100 ರೂ. ನೋಟು ಇಟ್ಟುಕೊಳ್ಳಲು ಆಗುವುದಿಲ್ಲವೇ ಎಂದು ಕೇಳಿ ನಾಲ್ಕು ಬಾರಿಸಿದ್ದಾರೆ.
ವಿಷಯದ ಬಗ್ಗೆ ದೂರು ದಾಖಲಾಗಿದೆ.
Next Story





