ಇವುಗಳಿಗೆ 500, 1000 ರೂ. ಹಳೆ ನೋಟಿನಲ್ಲೇ ಪಾವತಿಸಬಹುದು !
ಆದರೆ ಇದು ಯಾವತ್ತಿನವರೆಗೆ ?

ಹೊಸದಿಲ್ಲಿ, ನ.10: ಹಳೆಯ ರೂ. 500 ಹಾಗೂ 1000ದ ನೋಟುಗಳನ್ನು ನ.11ರ ಮಧ್ಯರಾತ್ರಿಯವರೆಗೆ ಸೌಲಭ್ಯದ ಬಿಲ್, ತೆರಿಗೆ, ದಂಡ ಹಾಗೂ ಕೇಂದ್ರ ಮತ್ತು ರಾಜ್ಯ ಸರಕಾರಗಳ ಶುಲ್ಕಗಳನ್ನು ಪಾವತಿಸಲು ಉಪಯೋಗಿಸಬಹುದೆಂದು ಕೇಂದ್ರ ಸರಕಾರವಿಂದು ತಿಳಿಸಿದೆ.
ಈ ಕುರಿತು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಶಕ್ತಿಕಾಂತ್ ದಾಸ್ ಇಂದು ಟ್ವೀಟಿಸಿದ್ದಾರೆ. ಅಂತಹ ನೋಟುಗಳನ್ನು ನೀರು ಹಾಗೂ ವಿದ್ಯುತ್ ಶುಲ್ಕ, ನಗರಪಾಲಿಕೆ ಮತ್ತು ಸ್ಥಳೀಯಾಡಳಿತ ಸಂಸ್ಥೆಗಳು ಸೇರಿದಂತೆ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ಶುಲ್ಕ, ತೆರಿಗೆ, ದಂಡಗಳ ಪಾವತಿಗೆ ಸ್ವೀಕರಿಸಲಾಗುತ್ತದೆಂದು ಅವರು ಹೇಳಿದ್ದಾರೆ.
ಈ ಸೌಲಭ್ಯ ನ.11ರ ಮಧ್ಯರಾತ್ರಿಯವರೆಗೆ ದೊರೆಯಲಿದೆ. ದಾಖಲೆಗಳನ್ನು ಇರಿಸಿಕೊಳ್ಳಬೇಕೆಂದು ದಾಸ್ ತಿಳಿಸಿದ್ದಾರೆ.
Next Story





