ಬ್ಯಾಂಕ್‌ನಲ್ಲಿ ಮಹಿಳೆಯ ಬ್ಯಾಗ್ ಎಗರಿಸಿದ ಖದೀಮರು

ಕಾಸರಗೋಡು, ನ.10: ನೋಟ್‌ಗಳ ಬದಲಾವಣೆಗೆಂದು ಬ್ಯಾಂಕ್‌ಗೆ ಆಗಮಿಸಿದ್ದ ಮಹಿಳೆಯ ಬಳಿಯಿದ್ದ ನಗದು ತುಂಬಿದ ಬ್ಯಾಗ್‌ನ್ನು ಕಳ್ಳರು ಎಗರಿಸಿ ಪರಾರಿಯಾದ ಘಟನೆ ನಗರದ ಬ್ಯಾಂಕೊಂದರಲ್ಲಿ ನಡೆದಿದೆ. ಮಹಿಳೆಯ ಬಳಿಯಿದ್ದ 40 ಸಾವಿರ ರೂ. ಕಳ್ಳರ ಪಾಲಾಗಿದೆ.
ಕೂಡ್ಲು ನಿವಾಸಿ ಗಿರಿಜಾ (46) ಹಣ ಕಳೆದುಕೊಂಡ ಮಹಿಳೆ.
ತಮ್ಮಲ್ಲಿದ್ದ 40 ಸಾವಿರ ರೂ.ನ ನೋಟ್‌ಗಳ ಬದಲಾವಣೆಗೆಂದು ಗುರುವಾರ ಗಿರಿಜಾ ಅವರು ನಗರದ ಹಳೆ ಬಸ್ಸು ನಿಲ್ದಾಣದ ಬ್ಯಾಂಕ್‌ಗೆ ಆಗಮಿಸಿದ್ದರು. ತಮ್ಮ ಸರದಿಗಾಗಿ ಸಂದಣಿ ನಡುವೆ ಇದ್ದಾಗ ಇವರ ಕೈಯಲ್ಲಿದ್ದ ಬ್ಯಾಗ್ ನಾಪತ್ತೆಯಾಗಿದೆ. ಬ್ಯಾಂಕ್‌ನಲ್ಲಿದ್ದ ಜನಸಂದಣಿಯ ಲಾಭ ಪಡೆದ ಕಳ್ಳರು ತಮ್ಮ ಕೈ ಚಳಕ ತೋರಿಸಿದ್ದಾರೆ.
ಈ ಬಗ್ಗೆ ಕಾಸರಗೋಡು ನಗರ ಠಾಣಾ ಪೊಲೀಸರಿಗೆ ದೂರು ನೀಡಲಾಗಿದ್ದು, ಬ್ಯಾಂಕಿನ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Next Story





