ಟ್ರಂಪ್ ಕೈಹಿಡಿದ ಮಹಿಳಾ ಮತದಾರರು

ಲಾಸ್ ಏಂಜಲಿಸ್, ನ. 10: ಲೈಂಗಿಕ ದೌರ್ಜನ್ಯ ಆರೋಪಗಳು ಹಾಗೂ ಗರ್ಭಪಾತ ಕುರಿತ ವಿವಾದಾಸ್ಪದ ನಿಲುವುಗಳ ಹೊರತಾಗಿಯೂ, ಮಹಿಳಾ ಮತದಾರರು ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಕೈಹಿಡಿದಿದ್ದಾರೆ.
ಅವರ ಎದುರಾಳಿ ಡೆಮಾಕ್ರಟಿಕ್ ಪಕ್ಷದ ಹಿಲರಿ ಕ್ಲಿಂಟನ್ 54 ಶೇಕಡ ಮಹಿಳಾ ಮತಗಳನ್ನು ಪಡೆದರೂ, 42 ಶೇಕಡ ಮಹಿಳೆಯರು ಟ್ರಂಪ್ ಪರವಾಗಿ ಮತ ಚಲಾಯಿಸಿದ್ದಾರೆ. ಇದು ಅವರ ಅನಿರೀಕ್ಷಿತ ವಿಜಯಕ್ಕೆ ಕಾರಣವಾಯಿತು ಎಂದು ಸಿಎನ್‌ಎನ್ ಮತದಾನೋತ್ತರ ಸಮೀಕ್ಷೆ ಹೇಳಿದೆ.
ಬಿಳಿಯ ಮಹಿಳೆಯರ ಪೈಕಿ 53 ಶೇಕಡ ಮಂದಿ ರಿಪಬ್ಲಿಕನ್ ಅಭ್ಯರ್ಥಿಗೆ ಬೆಂಬಲ ಸೂಚಿಸಿದ್ದಾರೆ ಹಾಗೂ ಅವರ ಪೈಕಿ ಹೆಚ್ಚಿನವರು (62 ಶೇಕಡ) ಕಾಲೇಜು ಶಿಕ್ಷಣ ಪಡೆಯದ ಮಹಿಳೆಯರು ಎಂದು ಸಿಎನ್‌ಎನ್ ಹೇಳಿದೆ.
Next Story





