ಅರೆನಗ್ನ ಚಿತ್ರಗಳನ್ನು ವೀಕ್ಷಿಸಿಲ್ಲ. ಯಾವುದೇ ತನಿಖೆಗೆ ಸಿದ್ಧ :ಸಚಿವ ಸೇಠ್

ರಾಯಚೂರು,ನ.10: "ಅರೆನಗ್ನ ಚಿತ್ರಗಳನ್ನು ವೀಕ್ಷಿಸಿಲ್ಲ. ಯಾವುದೇ ತನಿಖೆಗೆ ನಾನು ಸಿದ್ಧ " ಎಂದು ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ತಿಳಿಸಿದ್ದಾರೆ.
ಕೆಲವು ಟಿವಿ ಚಾನಲ್ ಗಳಲ್ಲಿ ಬಂದಿರುವ ವರದಿಗೆ ಪ್ರತಿಕ್ರಿಯೆ ನೀಡಿರುವ ಅವರು "ವಾಟ್ಸಾಪ್ ನಲ್ಲಿ ಬಂದಿರುವ ಚಿತ್ರಗಳನ್ನು ವೀಕ್ಷಿಸುತ್ತಿದ್ದೆ. ನಾನು ಸುಸಂಸ್ಕೃತ ಕುಟುಂಬದಿಂದ ಬಂದವನು. ಅರೆನಗ್ನ ಚಿತ್ರಗಳನ್ನು ನೋಡುವ ಕೆಲಸ ಮಾಡಿಲ್ಲ.ಪ್ರಚಲಿತ ವಿದ್ಯಮಾನಗಳನ್ನು ತಿಳಿಯುವುದು ನನ್ನ ಕರ್ತವ್ಯ.ಹಾಗೇ ವಾಟ್ಸಾಪ್‌ನಲ್ಲಿ ಸುದ್ದಿ ಓದುವಾಗ ಇಂತಹ ಚಿತ್ರಗಳು ಬಂದಿವೆ. ಘಟನೆಯ ಬಗ್ಗೆ ಮುಖ್ಯ ಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಸ್ಪಷ್ಟ ನೀಡಿರುವೆನು''ಎಂದು ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಕಾಂಗ್ರೆಸ್ ಗರಂ:ರಾಯಚೂರಿನಲ್ಲಿ ಟಿಪ್ಪು ಜಯಂತಿ ಸಮಾರಂಭದ ವೇದಿಕೆಯಲ್ಲಿ ಕುಳಿದಿದ್ದ ಸಚಿವ ತನ್ವೀರ್ ಸೇಠ್ ಪ್ರಕರಣವನ್ನು ಕಾಂಗ್ರೆಸ್ ಗಂಭೀರವಾಗಿ ಪರಿಗಣಿಸಿದ್ದು, ಈ ಬಗ್ಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್ ಸಿಂಗ್ ಅವರು ಮುಖ್ಯ ಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷರಿಗೆ ವರದಿ ಸಲ್ಲಿಸಲು ಸೂಚನೆ ನೀಡಿದ್ದಾರೆಂದು ತಿಳಿದು ಬಂದಿದೆ.
ರಾಜ್ಯದ ಹಲವಡೆ ತನ್ವೀರ್ ಸೇಠ್ ಪ್ರಕರಣವನ್ನು ಮುಂದಿಟ್ಟುಕೊಂಡು ಬಿಜೆಪಿ ಪ್ರತಿಭಟನೆ ನಡೆಸುತ್ತಿದೆ.







