ಪಾರ್ಶ್ವವಾಯುಪೀಡಿತ ಮಂಗಗಳ ಕಾಲುಗಳಿಗೆ ಚಲನೆಯನ್ನು ತಂದ ಸಂಶೋಧನೆ
.jpg)
ವಾಶಿಂಗ್ಟನ್, ನ. 10: ಮಹತ್ವದ ಸಂಶೋಧನೆಯೊಂದರಲ್ಲಿ, ಪಾರ್ಶ್ವವಾಯುಪೀಡಿತ ಮಂಗಗಳ ಕಾಲುಗಳಿಗೆ ಚಲನೆಯನ್ನು ಮತ್ತೆ ತರುವಲ್ಲಿ ವಿಜ್ಞಾನಿಗಳು ಯಶಸ್ವಿಯಾಗಿದ್ದಾರೆ. ಬೆನ್ನುಹುರಿಯಲ್ಲಿರುವ ಚಲನೆಗೆ ಕಾರಣವಾಗಿರುವ ನರಗಳನ್ನು ಉದ್ದೀಪಿಸಲು ನಿಸ್ತಂತು ಮೆದುಳು ಸೆನ್ಸರ್‌ಗಳನ್ನು ಕಸಿ ಮಾಡುವ ಮೂಲಕ ಇದನ್ನು ಸಾಧಿಸಲಾಗಿದೆ.
ಬೆನ್ನು ಮೂಳೆಯಲ್ಲಿ ಗಾಯವಾಗಿರುವ ಮಾನವರಿಗೂ ಇಂಥದೇ ವ್ಯವಸ್ಥೆಯೊಂದನ್ನು ಅಭಿವೃದ್ಧಿಪಡಿಸಲು ಈ ಸಂಶೋಧನೆ ನೆರವಾಗಲಿದೆ.
ನಿಸ್ತಂತು ‘ಬ್ರೇನ್ ಸ್ಪೈನಲ್ ಇಂಟರ್‌ಫೇಸ್’ ಎಂಬ ಸಾಧನವು ಕಾಲುಗಳಲ್ಲಿ ತಾತ್ಕಾಲಿಕ ಪಾರ್ಶ್ವವಾಯು ಕಾಣಿಸಿಕೊಂಡ ಎರಡು ಮಂಗಗಳ ಬೆನ್ನುಹುರಿಯ ಗಾಯಗಳನ್ನು ಉಪೇಕ್ಷಿಸಿ ಕಾಲುಗಳಿಗೆ ಚಲನೆ ತರುವಲ್ಲಿ ನೆರವು ನೀಡಿದೆ.
‘‘ಈ ವ್ಯವಸ್ಥೆಯನ್ನು ಮಂಗಗಳಲ್ಲಿ ಜಾರಿಗೆ ತಂದಾಗ, ಅವುಗಳು ಬಹುತೇಕ ಸಾಮಾನ್ಯ ಚಲನೆಯನ್ನು ಮರಳಿ ಪಡೆದವು’’ ಎಂದು ಅಮೆರಿಕದ ಬ್ರೌನ್ ವಿಶ್ವವಿದ್ಯಾನಿಲಯದಲ್ಲಿ ಸಹಾಯಕ ಪ್ರೊಫೆಸರ್ ಆಗಿರುವ ಡೇವಿಡ್ ಬೋರ್ಟನ್ ಹೇಳಿದರು.
Next Story





