ಟಿಪ್ಪು ಜಯಂತಿ: ವಿರೋಧಿ ಸಮಿತಿಯ ಜಿಲ್ಲಾಧ್ಯಕ್ಷರೇ ಅಧ್ಯಕ್ಷ!

ಮೊದಲು ಅಧ್ಯಕ್ಷತೆ; ಬಳಿಕ ಬಂಧನ
ಅಧಿಕಾರಿಗಳಿಂದ ಟಿಪ್ಪು ಜಯಂತಿ ಆಚರಣೆ
ಶಾಸಕ ಅಪ್ಪಚ್ಚು ರಂಜನ್; ತಾಪಂ ಅಧ್ಯಕ್ಷೆ ಪುಷ್ಪಾ ಗೈರು
ಕೊಡಗು, ನ.10: ಟಿಪ್ಪು ಜಯಂತಿ ವಿರೋಧಿ ಸಮಿತಿಯ ಜಿಲ್ಲಾಧ್ಯಕ್ಷರೇ ಟಿಪ್ಪು ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಘಟನೆ ಜಲ್ಲೆಯ ಸೋಮವಾರ ಪೇಟೆಯಲ್ಲಿ ನಡೆದಿದೆ.
ತಾಲೂಕು ಆಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯಕ್ತ ಆಶ್ರಯದಲ್ಲಿ ಗುರುವಾರ ಇಲ್ಲಿನ ಚನ್ನಬಸಪ್ಪ ಸಭಾಂಗಣದಲ್ಲಿ ಇಂದು ನಡೆದ ಹಝ್ರತ್ ಟಿಪ್ಪು ಸುಲ್ತಾನ್ ಜನ್ಮ ದಿನಾಚರಣೆ ಕಾರ್ಯಕ್ರಮದ ಸಭಾಂಗಣದೊಳಗೆ ಕೇವಲ ಆಹ್ವಾನಿತರಿಗೆ ಮಾತ್ರ ಪ್ರವೇಶಿಸಲು ಅವಕಾಶ ಕಲ್ಪಿಸಲಾಗಿತ್ತು.
ಶಾಸಕ ಅಪ್ಪಚ್ಚು ರಂಜನ್ ಹಾಗೂ ತಾಪಂ ಅಧ್ಯಕ್ಷೆ ಪುಷ್ಪಾ ರಾಜೇಶ್ ಗೈರಾದ ಹಿನ್ನೆಲೆಯಲ್ಲಿ ತಾಲೂಕು ಪಂಚಾಯತ್ ಉಪಾಧ್ಯಕ್ಷ ಹಾಗೂ ಟಿಪ್ಪುಜಯಂತಿ ಆಚರಣೆ ವಿರೋಧಿ ಸಮಿತಿ ಜಿಲ್ಲಾಧ್ಯಕ್ಷ ಎಂ.ಬಿ. ಅಭಿಮನ್ಯು ಕುಮಾರ್ ಅಧ್ಯಕ್ಷತೆ ವಹಿಸಿಕೊಂಡರು.
ಕಾರ್ಯಕ್ರಮಕ್ಕೂ ಮೊದಲು ಪ್ರವೇಶ ದ್ವಾರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ಆಹ್ವಾನಿತರನ್ನು ಒಳಗೆ ಬಿಡುತ್ತಿದರು.್ದ ಪೊಲೀಸರು ಆಮಂತ್ರಣ ಪತ್ರವನ್ನು ಪರೀಕ್ಷಿಸಿ ಒಳಕ್ಕೆ ಬಿಡುತ್ತಿದ್ದ ಆಮಂತ್ರಣ ಪತ್ರದ ನಕಲು ಪ್ರತಿಯನ್ನು ಹಿಡಿದು ಬಂದವರಿಗೆ ಪ್ರವೇಶ ನಿರಾಕರಿಸಲಾಗುತ್ತಿತ್ತು. ಈ ಕಾರಣಕ್ಕಾಗಿ ಬೇಳೂರು ಗ್ರಾಪಂ ಉಪಾಧ್ಯಕ್ಷ ಸಂತೋಷ್, ಹಾನಗಲ್ ಗ್ರಾಪಂ ಉಪಾಧ್ಯಕ್ಷ ಮಿಥುನ್‌ರವರಿಗೆ ಪ್ರವೇಶ ನಿರಾಕರಿಸಲಾಯಿತು.
ಕಾರ್ಯಕ್ರಮ ಪ್ರಾರಂಭಕ್ಕೆ ಮೊದಲೆ ಆಹ್ವಾನಿತ ಗಣ್ಯರು ಸಭಾಂಗಣದ ಒಳಗೆ ಆಸೀನರಾಗಿದ್ದರು. ಶಿಷ್ಟಾಚಾರದಂತೆ ವೇದಿಕೆಗೆ ತೆರಳಿದ ಅಭಿಮನ್ಯು ಕುಮಾರ್ ಮತ್ತು ಆಹ್ವಾನಿತ ಗಣ್ಯರಾದ ಜಿಪಂ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಸದಸ್ಯರಾದ ಪೂರ್ಣಿಮ ಗೋಪಾಲ್, ತಾಪಂ ಸದಸ್ಯೆ ತಂಗಮ್ಮ, ಪಟ್ಟಣ ಪಂಚಾಯತ್ ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್, ಸ್ಥಾಯಿ ಸಮಿತಿ ಅಧ್ಯಕ್ಷೆ ಸುಶೀಲಾ ಈ ಕಾರ್ಯಕ್ರಮವನ್ನು ಬಹಿಷ್ಕರಿಸುತ್ತಿರುವುದಾಗಿ ಘೋಷಣೆ ಕೂಗುವುದರೊಂದಿಗೆ ಸಭಾಂಗಣದಿಂದ ಹೊರನಡೆದರು.
ಇದೇ ಸಂದರ್ಭ ಸಭಾಂಗಣದ ಎದುರು ಟಿಪ್ಪು ದಿನಾಚರಣೆಯನ್ನು ವಿರೋಧಿಸಿ ಘೋಷಣೆ ಕೂಗುತ್ತಿದ್ದವರನ್ನು ಸೇರಿದಂತೆ ಸಭಾಂಗಣದೊಳಗೆ ಧಿಕ್ಕಾರ ಕೂಗಿದ ಅಭಿಮನ್ಯು ಕುಮಾರ್ ಹಾಗೂ ಬಿಜೆಪಿಯ ಸದಸ್ಯರನ್ನು ಪೊಲೀಸರು ಬಂಧಿಸಿದರು. ಬಳಿಕ ಅಧ್ಯಕ್ಷತೆಯನ್ನು ತಹಶೀಲ್ದಾರ್ ಕೃಷ್ಣ ವಹಿಸಿ ಹಝ್ರತ್ ಟಿಪ್ಪು ಸುಲ್ತಾನ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಶುಭ ಹಾರೈಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಮಲ್ಲೇಸ್ವಾಮಿ ಮತ್ತು ತಾಪಂ ಾರ್ಯನಿರ್ವಣಾಧಿಕಾರಿ ಪಿ. ಚಂದ್ರಶೇಖರ್, ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಕೆ.ಎ. ಯಾಕೂಬ್, ಹರಪಳ್ಳಿ ರವೀಂದ್ರ ಸಂಘದ ಅಧ್ಯಕ್ಷ ಎಚ್.ಎ. ನಾಗರಾಜ್, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಲಾರೆನ್ಸ್ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.





