ಎರಡನೆ ಟೆಸ್ಟ್‌ನಲ್ಲಿ ಆಡುವೆ: ಆ್ಯಂಡರ್ಸನ್ ವಿಶ್ವಾಸ

ರಾಜ್‌ಕೋಟ್, ನ.10: ಬಂದರು ನಗರ ವಿಶಾಖಪಟ್ಟಣದಲ್ಲಿ ನ.17 ರಂದು ಆರಂಭವಾಗಲಿರುವ ಭಾರತ ವಿರುದ್ಧದ ಎರಡನೆ ಟೆಸ್ಟ್‌ನಲ್ಲಿ ಆಡುವುದಕ್ಕೆ ಫಿಟ್ ಆಗಿರುವ ವಿಶ್ವಾಸ ನನಗಿದೆ ಎಂದು ಇಂಗ್ಲೆಂಡ್‌ನ ಪ್ರಮುಖ ವೇಗದ ಬೌಲರ್ ಜೇಮ್ಸ್ ಆ್ಯಂಡರ್ಸನ್ ಹೇಳಿದ್ದಾರೆ
ಇಂಗ್ಲೆಂಡ್‌ನ ಪರ ಗರಿಷ್ಠ ಟೆಸ್ಟ್ ವಿಕೆಟ್‌ಗಳನ್ನು ಕಬಳಿಸಿ ದಾಖಲೆ ಬರೆದಿರುವ ಆ್ಯಂಡರ್ಸನ್ ಭುಜನೋವಿನಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಗಾಯದ ಸಮಸ್ಯೆಯಿಂದಾಗಿ ಬಾಂಗ್ಲಾ ವಿರುದ್ಧ ಡ್ರಾಗೊಂಡ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದ ಆ್ಯಂಡರ್ಸನ್ ಭಾರತ ವಿರುದ್ಧ ಟೆಸ್ಟ್ ಸರಣಿಯಿಂದ ಹೊರಗುಳಿಯುವ ಭೀತಿಯಲ್ಲಿದ್ದಾರೆ.
ಕಳೆದ ವಾರ ನಾನು ಕೆಲವು ಓವರ್ ಬೌಲಿಂಗ್ ಮಾಡಿದ್ದೆ. ಈ ವಾರವೂ ಬೌಲಿಂಗ್ ಮಾಡುವ ವಿಶ್ವಾಸದಲ್ಲಿರುವೆ. ದ್ವಿತೀಯ ಟೆಸ್ಟ್‌ನಲ್ಲಿ ಆಡಲು ಫಿಟ್ ಇರುವ ನಿರೀಕ್ಷೆಯಲ್ಲಿರುವೆ. ನನಗೆ ಭಾರತ ವಿರುದ್ಧ ಟೆಸ್ಟ್ ಸರಣಿಯಿಂದಲೇ ಹೊರಗುಳಿಯುವ ಭಯವಿತ್ತು. ಕಳೆದ ಎರಡರಿಂದ ಮೂರು ವಾರಗಳಿಂದ ನಾನು ಸಾಕಷ್ಟು ಚೇತರಿಸಿಕೊಂಡಿರುವೆ ಎಂದು ಆ್ಯಂಡರ್ಸನ್ ತಿಳಿಸಿದರು.
Next Story





