ದುಬೈ: ದಾರುನ್ನೂರ್ ವತಿಯಿಂದ ಬಿ.ಎಂ. ಹಾರಿಸ್‌ರಿಗೆ ಸನ್ಮಾನ

ದುಬೈ, ನ.10: ದಾರುನ್ನೂರ್ ಕಲ್ಚರಲ್ ಸೆಂಟರ್ ಯುಎಇ ಇದರ ವತಿಯಿಂದ ಯುಎಇಗೆ ಆಗಮಿಸಿದ್ದ ದಾರುನ್ನೂರ್ ಕೇಂದ್ರ ಸಮಿತಿ ಕಾಶಿಪಟ್ಣದ ಸ್ಥಾಪಕ ಸದಸ್ಯ, ಉದ್ಯಮಿ ಬಿ.ಎಂ. ಹಾರಿಸ್‌ರಿಗೆ ಸನ್ಮಾನ ಸಮಾರಂಭವು ದೇರಾ ರಾಫಿ ಹೋಟೆಲ್‌ನಲ್ಲಿ ನಡೆಯಿತು.
ದಾರುನ್ನೂರ್ ಯುಎಇಯ ಪ್ರಧಾನ ಕಾರ್ಯದರ್ಶಿ ಬದ್ರುದ್ದೀನ್ ಮಸೀದಿ ಮತ್ತು ಮುಖ್ಯ ಕಟ್ಟಡದ ಕಾಮಗಾರಿಯ ಪ್ರಗತಿ ಕುರಿತು ವಿವರಿಸಿದರು. ಬಳಿಕ ದಾರುನ್ನೂರ್ ಮುಖಂಡರು ಬಿ.ಎಂ. ಹಾರಿಸ್‌ರನ್ನು ಸ್ಮರಣಿಕೆ ನೀಡಿ ಸನ್ಮಾನಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಹಾರಿಸ್ ಅವರು, ದಾರುನ್ನೂರ್ ಯುಎಇಯಲ್ಲಿ ನಡೆಸಿಕೊಂಡು ಬರುತ್ತಿರುವ ಕಾರ್ಯಕ್ರಮಗಳು ಮತ್ತು ಜವಾಬ್ಧಾರಿ ಪ್ರಶಂಸನೀಯ ಎಂದು ದಾರುನ್ನೂರ್‌ನ ಕೆಲಸ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ನೂತನವಾಗಿ ರಚಿಸಲ್ಪಟ್ಟ ದಾರುನ್ನೂರ್ ಅಲ್ ನಹ್ದಾ ಶಾಖೆಯ ಅಧ್ಯಕ್ಷ ಅಶ್ರಫ್ ಮೌಲವಿ ಮತ್ತು ಪ್ರಧಾನ ಕಾರ್ಯದರ್ಶಿ ಅಕ್ಬರ್ ಅಲಿ ಅಗ್ರಹಾರ ಮಾತನಾಡಿದರು.
ದಾರುನ್ನೂರ್ ಯುಎಇಯ ಅಧ್ಯಕ್ಷ ಸಲೀಂ ಅಲ್ತಾಫ್ ಫರಂಗಿಪೇಟೆ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮವನ್ನು ದಾರುನ್ನೂರ್ ಅಲ್ ನಹ್ದಾ ಶಾಖೆಯ ಪ್ರಮುಖರಾದ ಉಸ್ತಾದ್ ಯೂಸುಫ್ ಹುದವಿ ಉದ್ಘಾಟಿಸಿದರು. ಉಸ್ತಾದ್ ಶರೀಫ್ ಅಶ್ರಫಿ ದುಆ ನೆರವೇರಿಸಿದರು. ದಾರುನ್ನೂರ್ ಯುಎಇ ಕಾರ್ಯದರ್ಶಿ ಅನ್ಸಾಫ್ ಪಾತೂರು ಸ್ವಾಗತಿಸಿದರು. ದಾರುನ್ನೂರ್ ಯುಎಇ ಉಪಾಧ್ಯಕ್ಷ ಮುಹಮ್ಮದ್ ರಫೀಕ್ ಅತೂರು ವಂದಿಸಿದರು.





