ಸಿಎಂ ಭೇಟಿ ಮಾಡಿದ ವಿ.ಕೆ.ಸಿಂಗ್

ಬೆಂಗಳೂರು, ನ.10: ರಾಜ್ಯ ಖಾತೆ ಸಚಿವ ಜನರಲ್ ವಿ.ಕೆ ಸಿಂಗ್ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಭೇಟಿ ಮಾಡಿ, ‘ಭಾರತ್ ಪ್ರವಾಸಿ’ ಕಾರ್ಯಕ್ರಮಗಳ ಕುರಿತು ಚರ್ಚಿಸಿದರು.
ಗುರುವಾರ ವಿಧಾನಸೌಧದ ಮುಖ್ಯಮಂತ್ರಿಗಳ ಕೊಠಡಿಯಲ್ಲಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ವಿ.ಕೆ ಸಿಂಗ್, ದೇಶದಲ್ಲೇ ಕರ್ನಾಟಕ ವಿಶಿಷ್ಟತೆಯಿಂದ ಕೂಡಿರುವ ರಾಜ್ಯವಾಗಿದೆ. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಭೇಟಿ ಮಾಡಿ ‘ಭಾರತ್ ಪ್ರವಾಸಿ’ ಕಾರ್ಯಕ್ರಮದ ಬಗ್ಗೆ ಚರ್ಚಿಸಲಾಗಿದೆ ಎಂದು ತಿಳಿಸಿದರು.
ರಾಜ್ಯ ಸರಕಾರ ಬೆಂಗಳೂರಿನಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿರುವ ಸ್ಟೀಲ್ ಬ್ರೀಡ್ಜ್ ಬಗ್ಗೆ ಪ್ರಶ್ನಿಸಿದಾಗ, ಸಾರ್ವಜನಿಕರಿಗೆ ತೊಂದರೆಯಾಗದಂತೆ ರಾಜ್ಯ ಸರಕಾರಗಳು ಯೋಜನೆ ಸಿದ್ಧಪಡಿಸಬೇಕೆಂದು ಹೇಳಿದರು.
Next Story





