ಕೊಡವರ ಶಿರಚ್ಛೇದ ಅಪ್ಪಟ ಸುಳ್ಳು: ಪತ್ರಕರ್ತ ಗುರುರಾಜ್
‘ಯೋಗ್ಯತೆಯಿದ್ದರೆ ಬೆಳಕು ನೀಡುವ ದೀಪಹಚ್ಚಿ, ಬೆಂಕಿ ಹಚ್ಚಬೇಡಿ’
ಬೆಂಗಳೂರು, ನ.10: ಟಿಪ್ಪು ಓರ್ವ ಕ್ರೂರಿ, ಮತಾಂಧ, ಸಾವಿರ ಕೊಡವರ ಶಿರಚ್ಛೇದ ಮಾಡಿದ, 90 ಸಾವಿರ ್ರೈೆಸ್ತರಿಗೆ ಚಿತ್ರಹಿಂಸೆ ನೀಡಿದ ಎಂಬುದು ಅಪ್ಪಟ ಸುಳ್ಳು. ರ ಗಣತಿ ಪ್ರಕಾರ ಕೊಡವ ಸಂಸ್ಥಾನದ ಜನಸಂಖ್ಯೆ ೇವಲ 5.50 ಲಕ್ಷ. ಆದರೆ, 2.50ಲಕ್ಷ ಮಂದಿಯನ್ನು ಟಿಪ್ಪು ಕೊಲ್ಲಲು ಹೇಗೆ ಸಾಧ್ಯ ಎಂದು ಹಿರಿಯ ಪತ್ರಕರ್ತ ಟಿ.ಗುರುರಾಜ್ ಇಂದಿಲ್ಲಿ ಪ್ರಶ್ನಿಸಿದ್ದಾರೆ.
ಗುರುವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಏರ್ಪಡಿಸಿದ್ದ ಟಿಪ್ಪು ಜಯಂತಿ ಸಮಾರಂಭದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಬ್ರಿಟಿಷರು ಭಾರತದೊಳಗೆ ಪ್ರವೇಶಿಸದಂತೆ ತಡೆಗೋಡೆಯಾಗಿದ್ದು ಟಿಪ್ಪು ಸುಲ್ತಾನ್ ಎಂದು ಬಣ್ಣಿಸಿದರು.
ನಿಮ್ಮಕ್ಕ-ತಂಗಿಯರು ಬೆತ್ತಲೆ ಇರಬೇಕಿತ್ತೇ: ಟಿಪ್ಪು ಮೊಟ್ಟ ಮೊದಲ ಬಾರಿಗೆ ಮಹಿಳೆಯರು ಮೈತುಂಬಾ ಬಟ್ಟೆ ಉಡಬೇಕೆಂಬ ಕಾನೂನು ಜಾರಿಗೆ ತಂದಿದ್ದ. ಹೆಂಡ- ಸಾರಾಯಿ ನಿಷೇಸಿದ್ದ. ಮಾತ್ರವಲ್ಲ ಜೂಜು ಅಡ್ಡೆಗಳು, ವೇಶ್ಯಾಗೃಹಗಳನ್ನು ಬಂದ್ ಮಾಡಿದ್ದ. ಆತನ ಸುಧಾರಣಾ ಕ್ರಮಗಳನ್ನು ಕೈಗೊಂಡಿದ್ದು ತಪ್ಪೇ. ಟಿಪ್ಪು ಸುಲ್ತಾನ್ ಅನುಷ್ಠಾನಕ್ಕೆ ತಂದ ಒಳ್ಳೆಯ ಅಂಶಗಳನ್ನು ಗಮನಿಸಿ ಎಂದರು.ಪ್ಪು ಸುಲ್ತಾನ್‌ನನ್ನು ಕ್ರೂರಿ ಎಂದು ಹೇಳುತ್ತಾರೆ. ಆದರೆ, ಟಿಪ್ಪು ಮರಣಾ ನಂತರ ಕೊಡವ ಸಂಸ್ಥಾನವ ನ್ನಾಳಿದ ಲಿಂಗರಾಜೇಂದ್ರನೆಂಬ ಅರಸನಿಗೆ ಪ್ರತಿನಿತ್ಯ ಹೊಸ ಹುಡುಗಿ ಬೇಕಿತ್ತು. ಆತನಿಗೆ ಹಸಿ ಬಾಣಂತಿ ಎದೆಹಾಲು ನೀಡಬೇಕಿತ್ತು. 800 ಮಂದಿ ಕೊಡವ ಯುವಕರ ತಲೆ ಕಡಿದ. ಆದರೂ ಈ ಬಗ್ಗೆ ಯಾರೊ ಬ್ಬರೂ ಪ್ರಶ್ನೆ ಮಾಡುವುದಿಲ್ಲ. ಟಿಪ್ಪು ಮುಸ್ಲಿಮ್ ಎಂಬ ಾರಣಕ್ಕೆ ವಿರೋಧ ಸರಿಯಲ್ಲ ಎಂದು ಟೀಕಿಸಿದರು.ಪ್ಪುವನ್ನು ಹಿಂದೂ ದ್ವೇಷಿ, ಮತಾಂಧನೆಂದು ಕೆಲವರು ದೂರುತ್ತಾರೆ. ಆದರೆ, ಆತ ನಿತ್ಯ ಪ್ರಾರ್ಥನೆ ಬಳಿಕ ಬ್ರಾಹ್ಮಣರ ಮುಂದೆ ಭವಿಷ್ಯ ಕೇಳಲು ತನ್ನ ಕೈಯೊಡ್ಡುತ್ತಿದ್ದ ಎಂದ ಅವರು, ಕೇರಳದಲ್ಲಿ 8 ಸಾವಿರ ದೇವಸ್ಥಾನಗಳನ್ನು ಟಿಪ್ಪು ನಾಶ ಮಾಡಿದ ಎಂದು ಹೇಳಲಾಗುತ್ತಿದೆ. ಆದರೆ, ಇಂದು ಕೇರಳದಲ್ಲಿ 23 ಸಾವಿರ ದೇವಸ್ಥಾನಗಳಿವೆ. ಆತ ಹಿಂದೂ ವಿರೋಯಾಗಿದ್ದರೆ ಶ್ರಂಗೇರಿ ಮಠಕ್ಕೆ ವಸ, ಬೆಳ್ಳಿ ಪಲ್ಲಕ್ಕಿಯನ್ನು ದೇಣಿಗೆ ನೀಡಿದ್ದೇಕೆ ಎಂದು ಪ್ರಶ್ನಿಸಿದರು.
ನಂಜನಗೂಡಿನ ನಂಜುಂಡೇಶ್ವರನಿಗೆ ಪಚ್ಚೆಲಿಂಗ ವನ್ನು ನೀಡಿದ್ದು ನಿತ್ಯ ಪೂಜೆ ನಡೆಯುತ್ತದೆ. ನಿಮಗೆ (ಬಿಜೆಪಿಯವರಿಗೆ) ತಾಕತ್ತಿದ್ದರೆ ಅದನ್ನು ಹೊರಗೆ ಬಿಸಾಡಬೇಕಲ್ಲವೇ ಎಂದ ಅವರು, ಬ್ರಿಟಿಷರ ಎಂಜಲಿನಾಸೆಗೆ ಬಲಿಯಾಗಿದ್ದವರನ್ನು ಟಿಪ್ಪು ಶಿಕ್ಷಿಸಿದ್ದು ಸತ್ಯ. ಆತನ ಮತಾಂತರವೂ ಅಂದಿನ ಕಾಲದಲ್ಲಿ ಶಿಕ್ಷೆಯ ಭಾಗವಾಗಿತ್ತು ಎಂದು ಉಲ್ಲೇಖಿಸಿದರು.
ಮರಣವಾಗಿ ಸಮಾಯಲ್ಲಿರುವ ಟಿಪ್ಪು ಸುಲ್ತಾನ್
ರನ್ನು 200ವರ್ಷಗಳ ಬಳಿಕವೂ ಇರಿದು ಕೊಳ್ಳುವ ಕೆಲಸ ನಡೆಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಯೋಗ್ಯತೆಯಿದ್ದರೆ ಬೆಳಕು ನೀಡುವ ದೀಪ ಹಚ್ಚಿ. ಬೆಂಕಿ ಹಚ್ಚಿ ಸುಡುವ ಕೆಲಸಕ್ಕೆ ಕೈಹಾಕಬೇಡಿ ಎಂದು ಸೂಚ್ಯವಾಗಿ ನುಡಿದರು.







