‘ಟಿಪ್ಪು ಸುಲ್ತಾನ್ ಏಕತಾ’ ಪ್ರಶಸ್ತಿ ಪ್ರದಾನ ಟಿಪ್ಪು ಜಯಂತಿಗೆ ಜನತೆಯ ಬೆಂಬಲ: ಎ.ಕೆ.ಸುಬ್ಬಯ್ಯ
ಬೆಂಗಳೂರು, ನ.10: ದೇಶದ ಮೊದಲ ಸ್ವಾತಂತ್ರ ಹೋರಾಟಗಾರ ಟಿಪ್ಪು ಸುಲ್ತಾನ್ ಜಯಂತಿಗೆ ಬಿಜೆಪಿ ಹಾಗೂ ಸಂಘಪರಿವಾರ ಹೊರತು ಪಡಿಸಿ ರಾಜ್ಯದ ಜನತೆಯ ಬೆಂಬಲವಿದೆ ಎಂದು ಹಿರಿಯ ವಕೀಲ ಎ.ಕೆ.ಸುಬ್ಬಯ್ಯ ತಿಳಿಸಿದ್ದಾರೆ.
ನಗರದ ಟಿಪ್ಪು ಅರಮನೆಯ ಬಳಿ ಆಯೋಜಿಸಿದ್ದ ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ‘ಟಿಪ್ಪು ಸುಲ್ತಾನ್ ಏಕತಾ’ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ಅವರು, ಜನಪರ, ದೇಶಪರ ಹಾಗೂ ಬದಲಾವಣೆ ಬಯಸುವ ವ್ಯಕ್ತಿಗಳನ್ನು ವಿರೋಸುವುದು ಸಂಘಪರಿವಾರದ ಅಜೆಂಡವಾಗಿದೆ. ಅದರ ಭಾಗವಾಗಿ ಟಿಪ್ಪು ಸುಲ್ತಾನ್ ಜಯಂತಿಯನ್ನು ವಿರೋಸುತ್ತಿದ್ದಾರೆ ಎಂದು ತಿಳಿಸಿದರು.
ದೇಶದ ಮೊದಲ ಸ್ವಾತಂತ್ರ ಹೋರಾಟಗಾರ ಟಿಪ್ಪು ಸುಲ್ತಾನ್ ಮುಸ್ಲಿಮ್ ಸಮುದಾಯಕ್ಕೆ ಸೇರಿದ ರಾಜನೆಂಬ ಕಾರಣಕ್ಕೆ ಕೆಲವು ಪೂರ್ವಾಗ್ರಹ ಪೀಡಿತ ಸಂಶೋಧಕರು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಇಂತವರು ಇತಿಹಾಸಕಾರರಾಗಲು ಸಾಧ್ಯವಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.ಾರ್ಯಕ್ರಮದಲ್ಲಿ ಅಖಿಲ ಕರ್ನಾಟಕ ಸೂಫಿ ಸಂತರ ಸಂಘದ ಅಧ್ಯಕ್ಷ ಸೂಫಿ ವಲಿಬಾ, ಕರ್ನಾಟಕ ಅನುದಾನಿ ತರಹಿತ ಅಲ್ಪಸಂಖ್ಯಾತ ಶಾಲೆಗಳ ಒಕ್ಕೂಟದ ಅಧ್ಯಕ್ಷ ಡಾ.ಗುಲ್‌ಷಾದ ಅಹ್ಮದ್ ಹಾಗೂ ಶೇಖ್ ಆಹ್ಮದ್ ಮತ್ತಿತರರಿದ್ದರು.





