ಟಿಪ್ಪು ಜಯಂತಿ ವಿರೋಸಿ ಬಿಜೆಪಿ ‘ಕರಾಳ ದಿನ’
ಬೆಂಗಳೂರು, ನ. 10: ಎಲ್ಲೋ ಒಂದು ಕಡೆ ಖಡ್ಗ ಹಿಡಿದು ಪೇಟ ಹಾಕಿದರೆ ನಾನು ಟಿಪ್ಪುಜಯಂತಿ ಬೆಂಬಲಿಸಿದ್ದೆ ಎನ್ನುವುದು ಸರಿಯಲ್ಲ. ಅಲ್ಲದೆ, ನಾನು ಅದಕ್ಕೆ ಪೂರಕವಾಗಿದ್ದೇನೆ ಎನ್ನುವುದಾದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಬೀತುಪಡಿಸಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸವಾಲು ಹಾಕಿದ್ದಾರೆ.
ಗುರುವಾರ ನಗರದ ಪುರಭವನದ ಎದುರು ರಾಜ್ಯ ಸರಕಾರ ಟಿಪ್ಪುಜಯಂತಿ ಆಚರಿಸುತ್ತಿರುವುದನ್ನು ವಿರೋಸಿ ಬಿಜೆಪಿ ಹಮ್ಮಿಕೊಂಡಿದ್ದ, ಕರಾಳ ದಿನಾಚರಣೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಬಿಜೆಪಿ ಎಂದಿಗೂ ಮುಸ್ಲಿಮರ ವಿರೋಯಲ್ಲ. ನಮ್ಮ ಹೋರಾಟ ಏನಿದ್ದರೂ ಟಿಪ್ಪುಸುಲ್ತಾನ್ ವಿರುದ್ಧವೇ ಮಾತ್ರ ಎಂದ ಅವರು, ದಲಿತರ, ರೈತರ ಹಾಗೂ ಜನ ಸಾಮಾನ್ಯರ ವಿರುದ್ಧವೂ ಹೋರಾಟ ನಡೆಸಲಿದ್ದೇವೆ. ಜೈಲುಗಳಲ್ಲಿರುವ ಖೈದಿಗಳನ್ನು ಖಾಲಿ ಮಾಡಿಸಿ. ನಮ್ಮನ್ನು ಜೈಲಿನಲ್ಲಿಡಲು ಸಿದ್ಧತೆ ಮಾಡಿಕೊಳ್ಳಿ ಎಂದು ಬಿ.ಎಸ್. ಯಡಿಯೂರಪ್ಪ ಹೇಳಿದರು.
ಪ್ರತಿಭಟನೆಯಲ್ಲಿ ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್, ಸಂಸದೆ ಶೋಭಾಕರಂದ್ಲಾಜೆ, ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ರಾಜ್ಯಾಧ್ಯಕ್ಷ ಅಬ್ದುಲ್ ಅಝೀಂ, ಸಂಶೋಧಕ ಎಂ.ಚಿದಾನಂದ ಮೂರ್ತಿ ಮತ್ತಿತರರು ಪಾಲ್ಗೊಂಡಿದ್ದರು.





