ಕಲ್ಲಿದ್ದಲು ಹಗರಣ: ಸೊರೇನ್-ದಾಸರಿಯನ್ನು ಆರೋಪಿಗಳಾಗಿಸಲು ನಕಾರ
ಹೊಸದಿಲ್ಲಿ, ನ.10: ಛತ್ತಿಸ್‌ಗಡದ ಕಲ್ಲಿದ್ದಲು ಗಣಿ ಮಂಜೂರಾತಿಯ ಅವ್ಯವಹಾರಕ್ಕೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಮಾಜಿ ಕಲ್ಲಿದ್ದಲು ಸಚಿವ ಶಿಬು ಸೊರೇನ್ ಹಾಗೂ ಆಗಿನ ಕಲ್ಲಿದ್ದಲು ಸಹಾಯಕ ಸಚಿವ ದಾಸರಿ ನಾರಾಯಣ ರಾವ್ ಅವರನ್ನು ಆರೋಪಿಗಳಾಗಿ ವಿಚಾರಣೆಯೆದುರಿಸಲು ಸಮನ್ಸ್ ನೀಡಬೇಕೆಂದು ಕಂಪೆನಿಯೊಂದರ ಮನವಿಯನ್ನು ವಿಶೇಷ ನ್ಯಾಯಾಲಯವಿಂದು ದಂಡ ವಿಧಿಸಿ ತಳ್ಳಿ ಹಾಕಿದೆ.
ಅರ್ಜಿಯನ್ನು ತಿರಸ್ಕರಿಸಿದ ವಿಶೇಷ ಸಿಬಿಐ ನ್ಯಾಯಾಧೀಶ ಭರತ್ ಪರಾಶರ್, ಅರ್ಜಿದಾರ ಸಂಸ್ಥೆ ಮೆ. ಜೆಎಲ್‌ಡಿ ಯಾವತ್ಮಲ್ ಎನರ್ಜಿ ಪ್ರೈ.ಲಿ.ಗೆ ರೂ. 1 ಲಕ್ಷ ನ್ಯಾಯಾಲಯದ ವೆಚ್ಚವನ್ನು ಪಾವತಿಸುವಂತೆ ಆದೇಶಿಸಿದ್ದಾರೆ.
ದಿಲ್ಲಿ ಕಾನೂನು ಸೇವಾ ಪ್ರಾಧಿಕಾರದಲ್ಲಿ ಆ ಮೊತ್ತವನ್ನು ಠೇವಣಿಯಿರಿಸುವಂತೆ ಕಂಪೆನಿಗೆ ಅವರು ಸೂಚಿಸಿದ್ದಾರೆ.
Next Story





