ಪೇಟಿಎಂಗಾಗಿ ಪ್ರಧಾನಿ ಜಾಹೀರಾತು ತೀವ್ರ ನಾಚಿಕೆಗೇಡು: ಕೇಜ್ರಿವಾಲ್
ಹೊಸದಿಲ್ಲಿ, ನ.10: ಖಾಸಗಿ ಆನ್‌ಲೈನ್ ಸಂಸ್ಥೆ ಪೇಟಿಎಂ, ಪ್ರಧಾನಿ ನರೇಂದ್ರ ಮೋದಿಯವರ ಚಿತ್ರವನ್ನು ಬಳಸುತ್ತಿರುವುದು ‘ತೀರಾ ನಾಚಿಕೆಗೇಡು’ ಎಂದು ದಿಲ್ಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಗುರುವಾರ ಆರೋಪಿಸಿದ್ದಾರೆ.
ಇದು ತೀರಾ ನಾಚಿಕೆಗೇಡು. ಪ್ರಧಾನಿ ಖಾಸಗಿ ಸಂಸ್ಥೆಗೆ ರೂಪದರ್ಶಿಯಾಗುವುದನ್ನು ಜನ ಬಯಸುತ್ತಾರೆಯೇ? ನಾಳೆ ಈ ಸಂಸ್ಥೆಗಳು ಏನಾದರೂ ತಪ್ಪು ಮಾಡಿದರೆ ಅವುಗಳ ವಿರುದ್ಧ ಯಾರು ಕ್ರಮ ಕೈಗೊಳ್ಳುತ್ತಾರೆ? ಎಂದು ಅವರು ಪ್ರಶ್ನಿಸಿದ್ದಾರೆ.
ಪೇಟಿಎಂ, ದೊಡ್ಡ ನೋಟುಗಳ ರದ್ದತಿಯ ಪ್ರಧಾನಿಯ ಘೋಷಣೆಯ ಅತಿ ದೊಡ್ಡ ಫಲಾನುಭವಿಯಾಗಿದೆ. ಮರುದಿನವೇ ಪ್ರಧಾನಿ ಜಾಹೀರಾತುಗಳಲ್ಲಿ ಕಾಣಿಸಿ ಕೊಂಡಿದ್ದಾರೆ. ಇದು ಯಾವ ವ್ಯವಹಾರ ಪ್ರಧಾನಿಯವರೇ? ಎಂದು ಕೇಜ್ರಿವಾಲ್ ಟ್ವೀಟಿಸಿದ್ದಾರೆ. ರೂ. 500 ಹಾಗೂ 1000ದ ನೋಟುಗಳ ರದ್ದತಿಯ ಸರಕಾರದ ನಿರ್ಧಾರವನ್ನು ‘ತುಘಲಕಿ ಫರ್ಮಾನ್’ ಎಂದು ಬುಧವಾರ ವ್ಯಾಖ್ಯಾನಿಸಿದ ಎಎಪಿ, ಇದನ್ನು ಕಪ್ಪು ಹಣ ಇರುವ ದೊಡ್ಡ ವ್ಯಾಪಾರಿಗಳಿಗೆ ಲಾಭ ಮಾಡಿಕೊಡಲು ಕೈಗೊಳ್ಳಲಾಗಿದೆಯೆಂದು ಆರೋಪಿಸಿತ್ತು.
Next Story





