ಫಿಲಿಪ್ಪೀನ್ಸ್ ಜಲಪ್ರದೇಶದಿಂದ ವಿಯೆಟ್ನಾಮ್ ಹಡಗಿನ ಸಿಬ್ಬಂದಿ ಅಪಹರಣ
ಝಂಬೋಂಗ, ನ. 11: ವಿಯೆಟ್ನಾಮ್‌ನ ಸರಕು ನೌಕೆಯೊಂದರ ಕನಿಷ್ಠ ಐವರು ಸಿಬ್ಬಂದಿಯನ್ನು ದಕ್ಷಿಣ ಫಿಲಿಪ್ಪೀನ್ಸ್ ಜಲಪ್ರದೇಶದಲ್ಲಿ ಶುಕ್ರವಾರ ಬಂದೂಕುಧಾರಿಗಳು ಅಪಹರಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಪ್ರದೇಶದಲ್ಲಿ ಭಯೋತ್ಪಾದಕರು ಒತ್ತೆಹಣಕ್ಕಾಗಿ ಹಡಗು ಸಿಬ್ಬಂದಿಯನ್ನು ಅಪಹರಿಸುವ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಇದರೊಂದಿಗೆ ಕಳೆದ ವಾರದಿಂದೀಚೆಗೆ ಈ ವಲಯದಲ್ಲಿ ಅಪಹರಣಕ್ಕೊಳಗಾಗಿರುವ ಹಡಗು ಸಿಬ್ಬಂದಿಯ ಸಂಖ್ಯೆ ಕನಿಷ್ಠ 8ಕ್ಕೇರಿದೆ.
Next Story





