ಮುಂದಿನ ಬಿಡುಗಡೆ 1000 ರೂಪಾಯಿ ಹೊಸ ನೋಟು?
ಹೊಸದಿಲ್ಲಿ,ನ.11: ಭಾರತೀಯ ರಿಸರ್ವ್ ಬ್ಯಾಂಕ್ ಹೊಸ 1000 ರೂಪಾಯಿ ನೋಟುಗಳನ್ನು ಹೊಸ ವಿನ್ಯಾಸ ಹಾಗೂ ಬಣ್ಣ ಸಂಯೋಜನೆಯೊಂದಿಗೆ ಚಲಾವಣೆಗೆ ಬಿಡುಗಡೆ ಮಾಡಲು ನಿರ್ಧರಿಸಿದೆ. ಇತರ ಮೌಲ್ಯದ ಹೊಸ ನೋಟುಗಳ ಜತೆಗೆ ಹೊಸ 1000 ರೂಪಾಯಿ ನೋಟುಗಳೂ ಬಿಡುಗಡೆಯಾಗಲಿವೆ.
ಮುಂದಿನ ಕೆಲವೇ ತಿಂಗಳುಗಳಲ್ಲಿ ಹೊಸ ಬಣ್ಣ, ಹೊಸ ವಿನ್ಯಾಸದ ನೋಟುಗಳು ಬಿಡುಗಡೆಯಾಗಲಿವೆ ಎಂದು ಆರ್ಥಿಕ ವ್ಯವಹಾರಗಳ ಖಾತೆ ಕಾರ್ಯದರ್ಶಿ ಶಕ್ತಿಕಾಂತದಾಸ್ ಹೇಳಿದ್ದಾರೆ. ಸದ್ಯಕ್ಕೆ ಇರುವ ಒತ್ತಡದ ಹಿನ್ನೆಲೆಯಲ್ಲಿ ತಕ್ಷಣ ಚಲಾವಣೆಗೆ ಬಿಡುಗಡೆಯಾಗುವ ಸಾಧ್ಯತೆ ಇಲ್ಲ. ಹೊಸ ನೋಟುಗಳನ್ನು ಬಿಡುಗಡೆ ಮಾಡುವ ಪ್ರಸ್ತಾವಕ್ಕೆ ತಾತ್ವಿಕ ಒಪ್ಪಿಗೆ ಸಿಕ್ಕಿದ್ದರೂ ತಕ್ಷಣಕ್ಕೆ ಬಿಡುಗಡೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಮೂಲಗಳು ಹೇಳಿವೆ. ಆದರೆ ಹೊಸ ವಿನ್ಯಾಸದ 500 ರೂಪಾಯಿ ನೋಟು ಹಾಗೂ 2000 ರೂಪಾಯಿ ನೋಟುಗಳನ್ನು ಎಲ್ಲ ಬ್ಯಾಂಕ್ ಹಾಗೂ ಅಂಚೆ ಕಚೇರಿಗಳಲ್ಲಿ ವಿತರಿಸಲಾಗುತ್ತಿದೆ.
Next Story





