ತಲೆನೋವಾದ 2000 ರೂಪಾಯಿ ಹೊಸ ನೋಟು

ಕೊಚ್ಚಿ, ನ. 12: ಹಳೆಯ 500,1000 ರೂಪಾಯಿ ನೋಟುಗಳಿಗಿಂತ ವ್ಯಾಪಾರಿಗಳಿಗೆ 2000ರೂಪಾಯಿಯ ಹೊಸನೋಟುಗಳುತಲೆನೋವು ಸೃಷ್ಟಿಸುತ್ತಿದೆ ಎಂದು ವರದಿಯೊಂದು ತಿಳಿಸಿದೆ. ಬ್ಯಾಂಕುಗಳು ಹೆಚ್ಚಾಗಿ ಬದಲಿಸಿಕೊಡುವಾಗ 2000ರೂಪಾಯಿ ನೋಟುಗಳನ್ನೇ ನೀಡುತ್ತವೆ. ಇದನ್ನು ತರುವವರಿಗೆ ಚಿಲ್ಲರೆ ಕೊಡಲು ಹಣ ಇಲ್ಲದ ಪರಿಸ್ಥಿತಿಯನ್ನು ಅವರುಎದುರಿಸುತ್ತಿದ್ದಾರೆ. 2000ರೂಪಾಯಿ ನೋಟು ತಂದು ಶುಕ್ರವಾರ ಪುಸ್ತಕದಂಗಡಿಯಲ್ಲಿ ಐನೂರು ರೂಪಾಯಿಯ ಪುಸ್ತಕ ಖರೀದಿಸಿ ಕೊನೆಗೆ ಚಿಲ್ಲರೆ ಇಲ್ಲದ್ದರಿಂದ ಪುಸ್ತಕವನ್ನು ಗಿರಾಕಿ ಅಲ್ಲೇ ಬಿಟ್ಟು ಹೋದ ಘಟನೆ ನಿನ್ನೆ ಎರ್ನಾಕುಲಂನಲ್ಲಿ ನಡೆದಿದೆ. ಕೆಲವುಪೆಟ್ರೋಲ್ ಬಂಕ್‌ಗಳಲ್ಲಿ ಚಿಲ್ಲರೆ ಇಲ್ಲ. 2000ರೂಪಾಯಿಯ ಹೊಸ ನೋಟನ್ನು ನೀಡಿದರೆ, ಹಳೆಯ 500,1000 ರೂಪಾಯಿಯ ನೋಟು ನೀಡಲಾಗುವುದು ಎಂದು ಬಂಕ್‌ನ ನೌಕರರು ಹೇಳುತ್ತಿದ್ದಾರೆ. ಹೀಗೆ 2000 ರೂಪಾಯಿ ಹೊಸ ನೋಟು ಕೈಯಲ್ಲಿಟ್ಟುಕೊಂಡರೂ ತಲೆ ನೋವು ತಪ್ಪಿದ್ದಲ್ಲ ಎಂದು ವರದಿ ತಿಳಿಸಿದೆ.
Next Story





