ಟ್ರಂಪ್‌ರ ಗೆಲುವಿನ ಹಿಂದೆ ಫೇಸ್‌ಬುಕ್: ಝುಕರ್‌ಬರ್ಗ್ ಪ್ರತಿಕ್ರಿಯೆ ಏನು ಗೊತ್ತೇ ?

ನ್ಯೂಯಾರ್ಕ್,ನ. 12: ಫೇಸ್‌ಬುಕ್ ಪ್ರಚಾರವಾದ ನಕಲಿ ಸುದ್ದಿಗಳು ಅಮೆರಿಕದ ಅಧ್ಯಕ್ಷ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್‌ರ ಗೆಲುವಿಗೆ ಕಾರಣವಾಗಿದೆ ಎನ್ನುವ ಆರೋಪವನ್ನು ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್ ಝುಕರ್‌ಬರ್ಗ್ ತಳ್ಳಿಹಾಕಿದ್ದಾರೆ. ಆರೋಪ ವಿಚಿತ್ರವಾದ ಆಶಯವಾಗಿದೆ. ಜನರು ತಮ್ಮ ಜೀವನದ ಅನುಭವಗಳನ್ನು ಮುಂದಿಟ್ಟು ಮತದಾನ ಮಾಡಿದ್ದರೆಂದು ಮಾರ್ಕ್ ಹೇಳಿದ್ದಾರೆ. ಪ್ರತಿಯೊಬ್ಬರಿಗೂ ಪ್ರಿಯವಾದ ವಿಷಯಗಳುಮಾತ್ರ ಅವರ ವಾಲ್‌ನಲ್ಲಿ ಪ್ರತ್ಯಕ್ಷವಾಗುವುದಕ್ಕೆ ಫೇಸ್‌ಬುಕ್ ಫಿಲ್ಟರ್ ಮಾಡುತ್ತಿದೆ ಎಂಬ ಆರೋಪವನ್ನು ಕೂಡಾ ಅವರು ತಿರಸ್ಕರಿಸಿದ್ದಾರೆಂದು ವರದಿಯಾಗಿದೆ.
ಬಳಕೆದಾರರ ಮುಂದೆ ವಿವಿಧ ಮಾಹಿತಿಗಳು ಪ್ರತ್ಯಕ್ಷಗೊಳ್ಳಬೇಕೆಂಬುದು ಫೇಸ್ ಬುಕ್ ಆಶಯವಾಗಿದೆ. ಈ ವಿಷಯದಲ್ಲಿ ತಾನು ಅತೀ ಜಾಗರೂಕನಾಗಿರುವೆ ಎಂದು ಹೇಳಿರುವ ಝುಕರ್‌ಬರ್ಗ್ ಈಬಗ್ಗೆ ಬಹಳಷ್ಟು ಪರಿಶೀಲನೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ. 20ವರ್ಷ ಗಳ ಹಿಂದೆ ಕೆಲವು ವಿಷಯಗಳನ್ನು ಅಡಗಿಸಿಡಲು ಮಾಧ್ಯಮಗಳಿಗೆ ಸಾಧ್ಯವಾಗಿತ್ತು. ಆದರೆ ಇಂದು ಅವು ಅಡಗಿಸಿಡುವ ಸುದ್ದಿಗಳನ್ನು ಸಾಮಾಜಿಕ ಮಾಧ್ಯಮಗಳು ಬಹಿರಂಗಪಡಿಸುತ್ತಿವೆ ಎಂದು ಅವರು ಹೇಳಿದ್ದಾರೆ.





