Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಮಣ್ಣೇ ಇಲ್ಲದೆ ತರಕಾರಿ ಬೆಳೆದ ಭಾರತೀಯ...

ಮಣ್ಣೇ ಇಲ್ಲದೆ ತರಕಾರಿ ಬೆಳೆದ ಭಾರತೀಯ ಪೋರ ಶಂತನು !

ಜಗತ್ತಿನ ಗಮನ ಸೆಳೆದ ಸಂಶೋಧನೆ

ವಾರ್ತಾಭಾರತಿವಾರ್ತಾಭಾರತಿ12 Nov 2016 1:29 PM IST
share
ಮಣ್ಣೇ ಇಲ್ಲದೆ ತರಕಾರಿ ಬೆಳೆದ ಭಾರತೀಯ ಪೋರ ಶಂತನು !

ಹೊಸದಿಲ್ಲಿ, ನ. 12 :  ರಾತ್ರಿ ಊಟ ಮಾಡುತ್ತಿರುವಾಗ ಈ ಹುಡುಗ ತಂದೆಯಲ್ಲಿ ಕೇಳಿದ ಸರಳ ಆದರೆ ಕುತೂಹಲಕಾರಿ ಪ್ರಶ್ನೆ ಒಂದು ಹೊಸ ಸಂಶೋಧನೆಗೆ ನಾಂದಿ ಹಾಡಿದೆ. ಆ ಪ್ರಶ್ನೆ - " ನಮಗೆ ಮಣ್ಣು ಏಕೆ ಬೇಕು ?" ಎಂಬುದು. ನಗರ ಪ್ರದೇಶಗಳಲ್ಲಿ ಆಹಾರ ಹಾಗು ಅದನ್ನು ಬೆಳೆಯುವ ಸ್ಥಳದ ಕೊರತೆಯ ಬಗ್ಗೆ ನಡೆಯುತ್ತಿರುವ ಚರ್ಚೆಯ ಹಿನ್ನೆಲೆಯಲ್ಲಿ ಕೇಳಿದ ಈ ಪ್ರಶ್ನೆ ಆ ಹುಡುಗನ ಮನದಲ್ಲಿ ಮುದ್ರೆಯೊತ್ತಿ ಕುಳಿತಿತ್ತು. ಏಕೆಂದರೆ ಆ ಪ್ರಶ್ನೆ ಅತ್ಯಂತ ಸಕಾಲಿಕವಾಗಿತ್ತು. ಅದೇ ಮುಂದೆ ಆತನನ್ನು ಹೊಸತೊಂದು ತಂತ್ರಜ್ಞಾನಕ್ಕೆ ಹೊರಳುವಂತೆ ಮಾಡಿತು. ಅದರ ಹೆಸರು - ಹೈಡ್ರೋಪೋನಿಕ್ಸ್ - ಅಂದರೆ ಸಸ್ಯಗಳನ್ನು ನೀರು ಬಳಸದೆ ಬೆಳೆಸುವುದು ! 

ಆದರೆ ಹುಡುಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅದಕ್ಕಿಂತಲೂ ಅಗ್ಗದಲ್ಲಿ ಸಿಗುವ ಸಂಯೋಜನೆಯೊಂದನ್ನು ಸೃಷ್ಟಿಸಿದ. ಈಗ ಅದು ಇಡೀ ಜಗತ್ತಿನ ಗಮನ ಸೆಳೆದಿದೆ. ಅಂದ ಹಾಗೆ , ಈ 17 ವರ್ಷದ ಹುಡುಗನ ಹೆಸರು ಶಂತನು ಸಿಂಘಾಲ್ ! ಈತ ದಿಲ್ಲಿ ನಿವಾಸಿ. 

ಶಂತನುವಿನ ಸಂಶೋಧನೆಯನ್ನು ತಿಳಿದುಕೊಂಡು ಕ್ಯಾಲಿಫೋರ್ನಿಯಾದಲ್ಲಿ ನಡೆದ ಪ್ರತಿಷ್ಠಿತ ಟೆಡ್ ಎಕ್ಸ್ ನಲ್ಲಿ ಮಾತನಾಡಲು ಆತನಿಗೆ ಆಹ್ವಾನ ಬಂತು. . " ಜನರು ತಮ್ಮ ಆಹಾರವನ್ನು ತಾವೇ ಬೆಳೆಸಲು ಸಾಧ್ಯವಾಗುವಂತಹ ತಂತ್ರಜ್ಞಾನ ರೂಪಿಸಲು ನಾನು ಯೋಚಿಸಿದೆ. ಅದಕ್ಕಾಗಿ ನನ್ನ ಹೊಸ ಉದ್ಯಮ ಸಂಸ್ಥೆ ' ಉನ್ನತ್ ' ಹೆಸರಲ್ಲಿ ಪ್ರಾರಂಭಿಸಿದೆ. ಟೆಡ್ ಎಕ್ಸ್ ನಲ್ಲಿ ಮಾತನಾಡಿದಾಗ ಅಲ್ಲಿದ್ದವರು ನಾನು ಸೃಷ್ಟಿಸಿದ ಸಂಯೋಜನೆಯನ್ನು ಎಲ್ಲಿ ಖರೀದಿಸಬಹುದು ಎಂಬ ಆಸಕ್ತಿಯಲ್ಲಿದ್ದರು. ಇದಕ್ಕೆ ಕಾರಣ ಈವರೆಗೆ ಬಂದಿರುವ ತಂತ್ರಜ್ಞಾನಗಳಿಗೆ ಹೋಲಿಸಿದರೆ ನಾನು ರೂಪಿಸಿರುವ ತಂತ್ರಜ್ಞಾನ ಕಡಿಮೆ ಖರ್ಚಿನದ್ದು " ಎಂದು ಶಂತನು ಹೇಳಿದ್ದಾರೆ. 

ಈ ಹೊಸ ಸಂಯೋಜನೆ ರೂಪಿಸಲು ಶಂತನು ಸಾಕಷ್ಟು ಸಂಶೋಧನೆ ಮಾಡಿದ್ದಾರೆ. " ನಾನು ಏರೋಪೋನಿಕ್ಸ್ (ಗಾಳಿ ಬಳಸಿ ಸಸ್ಯ ಬೆಳೆಸುವ ತಂತ್ರಜ್ಞಾನ) ಕುರಿತು ಓದಿದ್ದೆ. ಆದರೆ ಅದು ಭಾರೀ ದುಬಾರಿ. ಅದಕ್ಕಾಗಿ ನಾನು ಬೇರೆಯೇ ಸಂಯೋಜನೆ ( ಮೈಕ್ರೋ ನ್ಯೂಟ್ರಿಯೆಂಟ್ ಗಳು , ಬೀಜಗಳು ಹಾಗು ಜೈವಿಕ ಕೀಟನಾಶಕಗಳುಳ್ಳ) ಯೊಂದನ್ನು ಸಂಶೋಧನೆ ಮಾಡಿದೆ. ಇದು ಮಣ್ಣಿನ ಬದಲಿಗೆ ಬಳಕೆಯಾಗುತ್ತದೆ ಮಾತ್ರವಲ್ಲ , ಇದನ್ನು ಕಡಿಮೆ ಬೆಲೆಗೆ ಪಡೆಯಬಹುದು " ಎಂದು ದಿಲ್ಲಿಯ ಸಂಸ್ಕೃತಿ ಶಾಲೆಯಲ್ಲಿ ಹನ್ನೊಂದನೇ ತರಗತಿಯಲ್ಲಿರುವ ಶಂತನು ಹೇಳಿದ್ದಾನೆ. 

ವಿಶೇಷವೇನೆಂದರೆ , ಶಂತನು ಶಾಲೆಯಲ್ಲಿ ವಿಜ್ಞಾನದ ವಿದ್ಯಾರ್ಥಿಯಲ್ಲ . ಆತ ಕಲಾ ವಿಭಾಗದಲ್ಲಿ ಕಲಿಯುತ್ತಿದ್ದಾನೆ ! ಬಯೋಟೆಕ್ನಾಲಜಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ತಂದೆಯ ನೆರವಿನೊಂದಿಗೆ ತನ್ನ ಸಂಶೋಧನೆ ನಡೆಸುತ್ತಿದ್ದಾನೆ ಶಂತನು. " ಮೊದಲು ನಾನು ಮೆಂತ್ಯೆ , ಪಾಲಕ್ , ಕೊತ್ತಂಬರಿ ಹಾಗು ಟೊಮೇಟೊಗಳನ್ನು ಬೆಳೆದೆ. ಇದರಲ್ಲಿ ನನಗೆ ನನ್ನ ತಂದೆ ಸಹಾಯ ಮಾಡಿದರು. ನಗರ ವಾಸಿಗಳು ತಮ್ಮ ಮನೆಯೊಳಗೇ ತಮಗೆ ಬೇಕಾದ ಆಹಾರ ಬೆಳೆಸಿಕೊಳ್ಳುವಂತೆ ಆಗಬೇಕು ಎಂಬುದು ನನ್ನ ಗುರಿ " ಎಂದಿದ್ದಾನೆ ಈ ಅಸಾಮಾನ್ಯ ಪ್ರತಿಭೆಯ ಬಾಲ ವಿಜ್ಞಾನಿ ! 

share
ವಾರ್ತಾಭಾರತಿ
ವಾರ್ತಾಭಾರತಿ
Next Story
X