ಹಿಲರಿ ಕ್ಲಿಂಟನ್ ಈಗ ಎಲ್ಲಿದ್ದಾರೆ ಗೊತ್ತೇ ?

ವಾಷಿಂಗ್ಟನ್, ನ. 12: ಅಮೆರಿಕ ಅಧ್ಯಕ್ಷೀಯಚುನಾವಣೆಯಲ್ಲಿ ಸೋಲುಂಡಿರುವ ಡೆಮಕ್ರಾಟಿಕ್ ಪಾರ್ಟಿ ಅಭ್ಯರ್ಥಿ ಹಿಲರಿ ಕ್ಲಿಂಟನ್ ಎಲ್ಲಿದ್ದಾರೆಂದು ಅನುಯಾಯಿಗಳು ಮತ್ತು ವಿರೋಧಿಗಳು ಒಂದೇ ಸವನೆ ಪ್ರಶ್ನಿಸುತ್ತಿದ್ದಾರೆ. ಆದರೆ ಹಿಲರಿ ಕಳೆದ ದಿನ ವೆಸ್ಟಚೆಸ್ಟರ್ ಕೌಂಟಿಯ ಕಾಡಿನ ರಮಣೀಯ ಸ್ಥಳಗಳಲ್ಲಿ ಪ್ರವಾಸದಲ್ಲಿರುವುದು ತಾನು ನೋಡಿದ್ದೇನೆಂದು ಮಹಿಳೆಯೊಬ್ಬರ ಫೇಸ್‌ಬುಕ್ ಪೋಸ್ಟೊಂದು ತಿಳಿಸಿದೆ. ಸೋಲನ್ನೊಪ್ಪಿಕೊಂಡಿರುವೆ ಎಂದು ಘೋಷಿಸಿದ್ದರು ಆದರೆ, ಆನಂತರ ಹಿಲರಿ ಕ್ಲಿಂಟನ್ ಎಲ್ಲಿಯೂ ಸಾರ್ವಜನಿಕ ವೇದಿಕೆಯಲ್ಲಿ ಕಂಡು ಬಂದಿರಲಿಲ್ಲ.
ಮಾರ್ಗರೆಟ್ ಗೆರ್ಸ್ಟರ್ ಎಂಬ ಮಹಿಳೆ ತಾನುಮತ್ತು ಮಕ್ಕಳು ಪ್ರವಾಸದಲ್ಲಿ ತೆರಳಿದ್ದಾಗ ಕ್ಲಿಂಟನ್ ಮತ್ತು ಹಿಲರಿಯನ್ನು ಅನಿರೀಕ್ಷಿತವಾಗಿ ಭೇಟಿಯಾದೆ ಎಂದು ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ. ತಾನು ಮತ್ತು ಪುತ್ರಿ ಹಿಲರಿಗೆ ಅಭಿಮಾನದಿಂದ ವೋಟು ಹಾಕಿದ್ದೇವೆಂದು ಹೇಳಿದಾಗ ಹಿಲರಿ ಸಂತೋಷದಿಂದ ತನ್ನನ್ನು ಆಲಿಂಗಿಸಿಕೊಂಡರು ಎಂದು ಮಹಿಳೆಬರೆದುಕೊಂಡಿದ್ದಾರೆ. ಹಣ್ಣುಹಂಪಲುಗಳನ್ನು ಹಂಚಿಕೊಂಡು ನಾವು ಪರಸ್ಪರ ವಿದಾಯ ಹೇಳಿದೆವೆಂದೂ ಮಹಿಳೆ ತಿಳಿಸಿದ್ದಾರೆ.
ಹಿಲರಿ ಪತಿ ಕ್ಲಿಂಟನ್ ಜೊತೆ ನಿಂತಿರುವ ಫೋಟವನ್ನು ಮಾರ್ಗರೇಟ್ ತನ್ನ ಪೋಸ್ಟ್‌ನಲ್ಲಿ ಹಾಕಿದ್ದಾರೆ. ಚುನಾವಣಾ ಫಲಿತಾಂಶದ ನಂತರ ಪ್ರತ್ಯಕ್ಷಗೊಂಡ ಹಿಲರಿಯ ಪ್ರಥಮ ಫೋಟೊ ಇದೆಂದು ವರದಿಗಳು ತಿಳಿಸಿವೆ.







