ಜಮಾಅತೆ ಇಸ್ಲಾಮೀ ಹಿಂದ್ ಕೇರಳ ರಾಜ್ಯ ಉಪಾಧ್ಯಕ್ಷ ವಿ.ಟಿ. ತಂಞಳ್ ನ.13 ರಂದು ಉಪ್ಪಿನಂಗಡಿಗೆ

ಉಪ್ಪಿನಂಗಡಿ, ನ.12: 'ನೀವು ವಿಶ್ವಾಸಿಗಳಾಗಿದ್ದರೆ ನೀವೇ ವಿಜಯಿಗಳಾಗುವಿರಿ' ಎಂಬ ಧ್ಯೇಯ ವಾಕ್ಯದೊಂದಿಗೆ ಇಲ್ಲಿ ನಡೆಯುವ ಜಮಾಅತೆ ಇಸ್ಲಾಮೀ ಹಿಂದ್ ದ.ಕ.ಜಿಲ್ಲಾ ಸಮಾವೇಶಕ್ಕೆ ಕೇರಳದ ಪ್ರಮುಖ ವಿದ್ವಾಂಸ, ವಾಗ್ಮಿ ಹಾಗೂ ಸಂಘಟನೆಯ ಕೇರಳ ರಾಜ್ಯ ಉಪಾಧ್ಯಕ್ಷರಾದ ವಿ.ಟಿ.ಅಬ್ದುಲ್ಲಾ ಕೋಯ ತಂಞಳ್ ರವಿವಾರ ಆಗಮಿಸಲಿದ್ದಾರೆ.
ಸಮಾವೇಶದಲ್ಲಿ ಇಸ್ಲಾಂ ಮತ್ತು ಇಸ್ಲಾಮೀ ಆಂದೋಲನ: 'ವರ್ತಮಾನ ಮತ್ತು ಭವಿಷ್ಯ' ಎಂಬ ವಿಷಯದ ಬಗ್ಗೆ ಪ್ರಮುಖ ಭಾಷಣ ಮಾಡಲಿದ್ದಾರೆ. ಅಲ್ಲದೆ ಜಮಾಅತ್'ನ ಕರ್ನಾಟಕ ರಾಜ್ಯ ಸಲಹಾ ಸಮಿತಿಯ ಸದಸ್ಯರಾದ ಮುಹಮ್ಮದ್ ಕುಂಞಿಯವರು 'ನಮ್ಮ ಸಮಾಜ-ನಮ್ಮ ಹೊಣೆಗಾರಿಕೆ' ಎಂಬ ವಿಷಯದ ಬಗ್ಗೆ ಮಾತನಾಡಲಿದ್ದಾರೆ.
ಅಪರಾಹ್ನ ನಡೆಯುವ ಸಮುದಾಯದ ಸಬಲೀಕರಣ ಹೇಗೆ ಸಾಧ್ಯ ಎಂಬ ಮಹತ್ವಪೂರ್ಣ ಚರ್ಚಾಗೋಷ್ಠಿ ನಡೆಯಲಿದ್ದು ಮುಸ್ಲಿಮ್ ಲೇಖಕರ ಉಪಾಧ್ಯಕ್ಷ ರಾದ ಸಾಹಿತಿ, ಕವಿ ಬಿ.ಎ.ಮುಹಮ್ಮದಾಲಿಯವರು ಚರ್ಚೆಯನ್ನು ನಡೆಸಿಕೊಡಲಿದ್ದಾರೆ.
ಪ್ರಮುಖರಾದ ಶಾಹುಲ್ ಹಮೀದ್ ಕೆ.ಕೆ., ಮುಸ್ತಫಾ ಕೆಂಪಿ,ಅಬ್ದುರ್ರಹ್ಮಾನ್ ಮಠ, ಫಝ್ಲುಲ್ ರಹೀಮ್, ಸಯೀದ್ ಇಸ್ಮಾಯೀಲ್, ನೂರುದ್ದೀನ್ ಸಾಲ್ಮರ, ರಫೀಕ್ ಮಾಸ್ಟರ್ ಆತೂರು, ಕೆ.ಎಂ.ಮುಸ್ತಫಾ ಸುಳ್ಯ ಮತ್ತು ಅಶ್ಫಾಕ್ ಶರೀಫ್ ಚರ್ಚೆಯಲ್ಲಿ ಭಾಗವಹಿಸಲಿದ್ದು ಮುಹಮ್ಮದ್ ಕುಂಞಿ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.
ಸಂಜೆ ನಡೆಯುವ 'ಇಸ್ಲಾಮ್-ಸಂತುಲಿತ ಧರ್ಮ' ಎಂಬ ವಿಷಯದ ಬಗ್ಗೆ ಸಾರ್ವಜನಿಕ ಭಾಷಣ ಮಾಡಲಿದ್ದಾರೆ ಎಂದು ಸಮಾವೇಶ ಸಂಚಾಲಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







