ಮಕ್ಕಳ ದಿನಾಚರಣೆ ಅಂಗವಾಗಿ ಮಕ್ಕಳಿಗೆ ಆಟೋಟ ಸ್ಪರ್ಧೆ

ಪುತ್ತೂರು,ನ.12: ಒಡಿಯೂರು ವಜ್ರಮಾತಾ ಮಹಿಳಾ ಘಟಕದ ವತಿಯಿಂದ ಮಕ್ಕಳ ದಿನಾಚರಣೆ ಅಂಗವಾಗಿ ವಿವಿಧ ಆಟೋಟ ಸ್ಪರ್ಧೆಗಳು ಶನಿವಾರ ನಗರದ ಮಂಜಲ್ಪಡ್ಪು ಬಿಇಎಂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರಗಿತು.
ವಜ್ರಮಾತಾ ಮಹಿಳಾ ಘಟಕದ ಸದಸ್ಯೆ ರೋಹಿಣಿ ರಾಘವ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಸ್ಪರ್ಧೆಯನ್ನು ನಡೆಸಿಕೊಟ್ಟರು. ಘಟಕದ ಅಧ್ಯಕ್ಷೆ ನಯನಾ ರೈ, ಕೋಶಾಧಿಕಾರಿ ಮೀನಾಕ್ಷಿ ರಾಮಚಂದ್ರ, ಅನ್ನಪೂರ್ಣಿಮಾ, ಸದಸ್ಯರಾದ ಶಾರದಾ ಕೇಶವ, ಲಯನೆಸ್ ಜಿಲ್ಲಾ ಅಧ್ಯಕ್ಷೆ ಪ್ರೇಮಲತಾ ರಾವ್, ಒಡಿಯೂರು ಗ್ರಾಮ ವಿಕಾಸ ಯೋಜನೆಯ ಪುತ್ತೂರು-ಸುಳ್ಯ ಘಟಕದ ಮೇಲ್ವಿಚಾರಕ ಸುರೇಶ್ ಶೆಟ್ಟಿ, ಶಿಕ್ಷಣ ಸಂಪನ್ಮೂಲ ಸದಸ್ಯರಾದ ಪ್ರಶಾಂತ್ ಮುರ, ಪ್ಯಾಟ್ರಿಕ್ ಲೊಬೊ. ಸಪ್ನಾ ಶೆಣೈ, ಶಿಕ್ಷಕ ವೃಂದದವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಆಟೋಟ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
Next Story





