ಮಲಪ್ಪುರಂನಲ್ಲಿ ಕಾರು ಹಾಗೂ ಲಾರಿ ಅಪಘಾತ : ನಾಲ್ವರು ಗಂಭೀರ

ಮಂಜೇಶ್ವರ,ನ.12 : ಕಾರು ಹಾಗೂ ಲಾರಿ ಪರಸ್ಪರ ಡಿಕ್ಕಿ ಹೊಡೆದು ಉಂಟಾದ ಅಪಘಾತದಲ್ಲಿ ಕಾಸರಗೋಡು ನಿವಾಸಿಗಳಾದ ನಾಲ್ಕು ಮಂದಿ ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾದ ಘಟನೆ ಮಲಪ್ಪುರಂ ಕೋಟಕ್ಕಲ್ ಎಂಬಲ್ಲಿ ಶನಿವಾರ ಮುಂಜಾನೆ ಸಂಭವಿಸಿದೆ.
ಕಾಸರಗೋಡು ನಾಯ್ಮರ್ ಮೂಲೆ ನಿವಾಸಿಗಳಾದ ಅಜ್ಮಲ್ ಜಲಾಲ್ (22), ಮೊಹಮ್ಮದ್ ತಾಹಿರ್ (21), ಮಧೂರು ನಿವಾಸಿ ಮುಸ್ತಾಕ್ (22) ಹಾಗೂ ಅರಂತ್ತೋಡ್ ನಿವಾಸಿ ಮೊಹಮ್ಮದ್ ಇಮ್ತಿಯಾರ್ (21) ಅಪಘಾತದಿಂದ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಯುವಕರಾಗಿದ್ದಾರೆ.
ಮಲಪ್ಪುರಂ ಕೋಟಕ್ಕಲ್ ಸಮೀಪದಲ್ಲಿ ಶನಿವಾರ ಮುಂಜಾನೆ 2.30 ರ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ. ಕೋಟಕ್ಕಲ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಎದುರಿನಿಂದ ಆಗಮಿಸಿದ ಲಾರಿ ಹಾಗೂ ಕಾಸರಗೋಡು ನಿವಾಸಿಗಳು ಸಂಚರಿಸುತಿದ್ದ ಕೆ ಎಲ್ 14 ಆರ್ 7039 ನೋಂದಾವಣೆಯ ಕಾರು ಪರಸ್ಪರ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ. ಅಪಘಾತದಲ್ಲಿ ಕಾರಿನ ಚಾಲಕ ಅಜ್ಮಲ್ ಜಲಾಲ್ ಹಾಗೂ ಮುಂಬಾಗದ ಸೀಟಿನಲ್ಲಿದ್ದ ತಾಯಿರ್ ಎಂಬಿವರ ಸ್ಥಿತಿ ಗಂಭೀರವಾಗಿದೆ. ಇಬ್ಬರನ್ನು ಕೋಟಕ್ಕಲ್ ಮಿಮ್ಸ್ ಆಸ್ಪತ್ರೆಯ ನಿಗಾ ಘಟಕದಲ್ಲಿ ದಾಖಲಿಸಲಾಗಿದೆ. ಬಾಕಿ ಉಳಿದವರನ್ನು ಕೋಟಕ್ಕಲ್ ಅಲ್ ಮಾಸ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಮಾಹಿತಿ ಅರಿತು ಸಂಬಂಧಿಕರು ಆಸ್ಪತ್ರೆಗೆ ಧಾವಿಸಿದ್ದಾರೆ.





