ನ.14 ಉಳ್ಳಾಲದಲ್ಲಿ ಯುವ ಕಾಂಗ್ರಸ್ ಸಮಾವೇಶ
ಕೊಣಾಜೆ,ನ.12: ಮಂಗಳೂರು ವಿದಾನಸಭಾ ಕ್ಷೇತ್ರ ಯುವ ಕಾಂಗ್ರೆಸ್ ಮತ್ತು ಬ್ಲಾಕ್ ಕಾಂಗ್ರೆಸ್ ಆಶ್ರಯದಲ್ಲಿ ಸೋಮವಾರ ಸಂಜೆ 6 ಗಂಟೆಗೆ ಉಳ್ಳಾಲ ನಗರಸಭೆ ಬಳಿಯಿರುವ ಮಹಾತ್ಮಾ ಗಾಂಧಿ ರಂಗ ಮಂದಿರದ ಮೈದಾನದಲ್ಲಿ ಯುವ ಕಾಂಗ್ರೆಸ್ ಸಮಾವೇಶ ನಡೆಯಲಿದೆ.
ಕಾರ್ಯಕ್ರಮದ ಪ್ರಯುಕ್ತ ಮಧ್ಯಾಹ್ನ 3 ಗಂಟೆಗೆ ಸಜಿಪ ನಡುವಿನಲ್ಲಿ ದ್ವಿಚಕ್ರ ವಾಹನ ಜಾಥಾ ಆರಂಭಗೊಳ್ಳಲಿದ್ದು, ಬೋಳಿಯಾರ್, ಮುಡಿಪು, ಕೊಣಾಜೆ, ಅಸೈಗೋಳಿ,ದೇರಳಕಟ್ಟೆ, ಕುತ್ತಾರ್, ತೊಕ್ಕೊಟ್ಟು ಮುಖಾಂತರ ಮಾಸ್ತಕಟ್ಟೆ ತಲುಪಲಿದ್ದು ಅಲ್ಲಿಂದ ಸಮಾವೇಶ ನಡೆಯುವ ಮೈದಾನದವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಬಳಿಕ ನಡೆಯುವ ಕಾರ್ಯಕ್ರಮ ಸಚಿವ ಯು.ಟಿ.ಖಾದರ್ ಉದ್ಘಾಟಿಸಲಿದ್ದು, ಕೆಪಿಸಿಸಿ ಕಾರ್ಯಾಧ್ಯಕ್ಷ ಕೃಷ್ಣ ಭೈರೇಗೌಡ, ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ವಿದಾನಪರಿಷತ್ ಸದಸ್ಯ ರಿಜ್ಷಾನ್ ಹರ್ಷಾದ್, ಸಹಿತ ಜಿಲ್ಲೆಯ ಶಾಸಕರು, ಜನಪ್ರತಿನಿಧಿಗಳು, ಮುಖಂಡರು ಭಾಗವಹಿಸಲಿದ್ದಾರೆ ಎಂದು ಶನಿವಾರ ತೊಕ್ಕೊಟ್ಟಿನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ನಗರಸಭಾ ಸದಸ್ಯ ದಿನೇಶ್ ರೈ ತಿಳಿಸಿದ್ದಾರೆ.
ಮಾಜಿ ಸದಸ್ಯ ಉಸ್ಮಾನ್ ಕಲ್ಲಾಪು, ಯುವ ಕಾಂಗ್ರೆಸ್ ಅಧ್ಯಕ್ಷ ನಝರ್ ಷಾ ಪಟ್ಟೋರಿ, ನಗರಸಭಾ ಸದಸ್ಯರಾದ ಮುಸ್ತಫಾ ಅಬ್ದುಲ್ಲಾ, ಯು.ಎ.ಇಸ್ಮಾಯಿಲ್, ಕಿನ್ಯ ಗ್ರಾಮ ಪಮಚಾಯಿತಿ ಉಪಾಧ್ಯಕ್ಷ ಸಿರಾಜ್, ಅಬೂಸಾಲಿ ಹಾಗೂ ಡೆನ್ನಿಸ್ ಡಿಸೋಜ ಉಪಸ್ಥಿತರಿದ್ದರು.





