ಚಿಕ್ಕಮಗಳೂರಿನಲ್ಲಿ ಜಾಗತಿಕ ಮಟ್ಟದ ಕಾಳುಮೆಣಸು ಸಮಾವೇಶ

ಚಿಕ್ಕಮಗಳೂರು,ನ.12 ಬಿಜೆಪಿಯ ರಾಜ್ಯಾಧ್ಯಕ್ಷರಾದ ಸನ್ಮಾನ್ಯ ಶ್ರೀ ಬಿ. ಎಸ್ . ಯಡಿಯೂರಪ್ಪನವರು ಚಿಕ್ಕಮಗಳೂರಿನಲ್ಲಿ ಇಂದು ಜಾಗತಿಕ ಮಟ್ಟದ ಕಾಳುಮೆಣಸು ಸಮಾವೇಶವನ್ನು ಉದ್ಘಾಟಿಸಿದರು. ಕರ್ನಾಟಕವು ದೇಶದಲ್ಲೇ ಅತೀ ಹೆಚ್ಚು ಕಾಳುಮೆಣಸು. ಉತ್ಪಾದಿಸುವ ರಾಜ್ಯವಾಗಿದೆ ಮತ್ತು ಚಿಕ್ಕಮಗಳೂರು ಈಗಾಗಲೆ ಕಾಳುಮೆಣಸಿನ ರಾಜಧಾನಿಯಾಗಿ ಹೊರಹೊಮ್ಮಿದೆ. ರೈತ ಬಾಂಧವರು ಆಧುನಿಕತೆಯ ಉಪಯೋಗ ಪಡೆದುಕೊಂಡು ಎಲ್ಲರೂ ಸಹ ಉತ್ತಮ ಹಾಗು ಶುದ್ಧ ಕಾಳುಮೆಣಸನ್ನು ಉತ್ಪಾದಿಸುವ ನಿಟ್ಟಿನಲ್ಲಿ ಗಮನ ಹರಿಸಬೇಕು ಮತ್ತು ರೈತರು ಭಾರತೀಯ ಕಾಳುಮೆಣಸಿನ ಗುಣಮಟ್ಟದ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಆ ನಿಟ್ಟಿನಲ್ಲಿ ವ್ಯವಸಾಯವನ್ನು ಮಾಡಬೇಕು. ಆಗ ಮಾತ್ರ ಹೆಚ್ಚು ಇಳುವರಿಯ ಉತ್ಕೃಷ್ಟ ಮಟ್ಟದ ಕಾಳುಮೆಣಸನ್ನು ಉತ್ಪಾದಿಸಲು ಸಾಧ್ಯ ಎಂದು ವಿನಂತಿಸಿದರು.
ಕೇಂದ್ರ ಸಚಿವ ಶ್ರೀ ಅನಂತಕುಮಾರ್,ಸಂಸತ್ ಸದಸ್ಯೆ ಕು.ಶೋಭಾ ಕರಂದ್ಲಾಜೆ,ಶಾಸಕ ಶ್ರೀ ಸಿ.ಟಿ.ರವಿ ಪಾಲ್ಗೊಂಡಿದ್ದರು.
Next Story





