ಬಂಟ್ವಾಳ ತೌಹೀದ್ ಶಾಲೆಗೆ ಕ್ರೀಡಾ ಪ್ರಶಸ್ತಿ

ವಿಟ್ಲ,ನ.12 : ಬಂಟ್ವಾಳ-ಕೆಳಗಿನಪೇಟೆಯ ತೌಹೀದ್ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ವಿವಿಧ ಕ್ರೀಡಾ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.
ನ 8 ಮತ್ತು 9 ರಂದು ಬಂಟ್ವಾಳ ತಾಲೂಕಿನ ಕೊಯಿಲದಲ್ಲಿ ನಡೆದ ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ಬಾಲಕ-ಬಾಲಕಿಯರ ಕ್ರೀಡಾಕೂಟದಲ್ಲಿ ಈ ಪ್ರಶಸ್ತಿಗಳು ಲಭಿಸಿದೆ. ನಫೀಸ ಶಾಜ್ಮ ಎತ್ತರ ಜಿಗಿತದಲ್ಲಿ ಪ್ರಥಮ, ಫಾತಿಮಾ ಶಿಫಾನಾ ಎತ್ತರ ಜಿಗಿತ ಹಾಗೂ ಗುಂಡು ಎಸೆತದಲ್ಲಿ ದ್ವಿತೀಯ, ಫಾತಿಮಾ ಫರ್‌ಹೀನಾ ಗುಂಡು ಎಸೆತದಲ್ಲಿ ದ್ವಿತೀಯ, ಅನೀಶ್ ರಹಿಮಾನ್ ಎತ್ತರ ಜಿಗಿತದಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದು, ಸುಳ್ಯ ತಾಲೂಕಿನ ಪಂಜದಲ್ಲಿ ನಡೆಯುವ ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
ಮುಹಮ್ಮದ್ ಫವಾರ್ 100 ಮೀ ಓಟದಲ್ಲಿ ತೃತೀಯ, ಫಾತಿಮತುಲ್ ಫಾಯಿಝ ಅಡೆತಡೆ ಓಟದಲ್ಲಿ ತೃತೀಯ ಸ್ಥಾನಗಳನ್ನು ಪಡೆದಿದ್ದಾರೆ ಎಂದು ತೌಹೀದ್ ಶಾಲಾ ಪ್ರಕಟಣೆ ತಿಳಿಸಿದೆ.
Next Story





