ಅಲ್ವಿರೊ ಪೀಟರ್ಸನ್ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಪ್ರಕರಣ

ಜೋಹಾನ್ಸ್‌ಬರ್ಗ್, ನ.12: ಸುದೀರ್ಘ ತನಿಖೆಯ ಬಳಿಕ ಕ್ರಿಕೆಟ್ ದಕ್ಷಿಣ ಆಫ್ರಿಕ(ಸಿಎಸ್‌ಎ) ಮಾಜಿ ಬ್ಯಾಟ್ಸ್‌ಮನ್ ಅಲ್ವಿರೊ ಪೀಟರ್ಸನ್ ವಿರುದ್ಧ ಮ್ಯಾಚ್ ಫಿಕ್ಸಿಂಗ ಪ್ರಕರಣ ದಾಖಲಿಸಿದೆ.
35ರ ಪ್ರಾಯದ, ಹೈವೆಲ್ಡ್ ಲಯನ್ಸ್ ತಂಡದ ನಾಯಕನಾಗಿರುವ ಪೀಟರ್ಸನ್ ವಿರುದ್ಧ ಹಲವು ಬಾರಿ ಸಿಎಸ್‌ಎನ ಭ್ರಷ್ಟಾಚಾರ ತಡೆ ಸಂಹಿತೆಯನ್ನು ಉಲ್ಲಂಘಿಸಿದ ಆರೋಪವಿದೆ.
2015ರ ರ್ಯಾಮ್‌ಸ್ಲಾಮ್ ಟ್ವೆಂಟಿ-20 ಟೂರ್ನಿಯಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆಯಲು ತನ್ನ ಪ್ರಭಾವ ಬಳಸಿದ ಆರೋಪ ಪೀಟರ್ಸನ್ ಮೇಲಿದೆ. ರ್ಯಾಮ್‌ಸ್ಲಾಮ್ ಟೂರ್ನಿಯಲ್ಲಿ ಮ್ಯಾಚ್‌ಫಿಕ್ಸಿಂಗ್ ನಡೆಸಿದ ಆರೋಪದಲ್ಲಿ ಗುಲಾಮ್ ಬೋದಿ, ಜಿಯಾನ್ ಸಿಮ್ಸ್, ಪುಮೆಲೆಲಾ ಮಶಟ್‌ಶಿಕ್ವಿ, ಎಥಿ ಎಂಲಟಿ ಹಾಗೂ ಥಾಮಿ ಸೊಲೆಕಿಲ್ ವಿರುದ್ಧ ದೀರ್ಘ ಕಾಲ ನಿಷೇಧವನ್ನು ವಿಧಿಸಲಾಗಿದೆ.
2015ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿರುವ ಪೀಟರ್ಸನ್ ಇಂಗ್ಲಿಷ್ ಕೌಂಟಿ ತಂಡಗಳಾದ ಗ್ಲಾಮೊರ್ಗನ್, ಎಸ್ಸೆಕ್ಸ್, ಸಮರ್‌ಸೆಟ್ ಹಾಗೂ ಲಂಕಾಶೈರ್‌ಗಳಲ್ಲಿ ಆಡಿದ್ದರು.
Next Story





