ಚೂರಿ ಇರಿತ: ಆಸ್ಪತ್ರೆಗೆ ಖಾದರ್ ಭೇಟಿ
ಶಾಂತಿ ಕಾಪಾಡಲು ಮನವಿ

ಮಂಗಳೂರು, ನ. 12: ಮಂಜನಾಡಿ ಬಳಿ ಇಬ್ಬರು ಯುವಕರಿಗೆ ಚೂರಿ ಇರಿತ ಪ್ರಕರಣವನ್ನು ತೀವ್ರವಾಗಿ ಖಂಡಿಸಿರುವ ಆಹಾರ ಸಚಿವ ಯು.ಟಿ.ಖಾದರ್, ಈ ಸಂಬಂಧ ವದಂತಿಗಳಿಗೆ ಕಿವಿಗೊಡದೆ, ಗೊಂದಲಕ್ಕೀಡಾಗದೆ ಶಾಂತಿ ಕಾಪಾಡುವಂತೆ ಜನತೆಯಲ್ಲಿ ಮನವಿ ಮಾಡಿದ್ದಾರೆ.
ಕಮಿಷನರ್‌ಗೆ ನಿರ್ದೇಶನ
ಜಿಲ್ಲೆಯ ಕೆಲವು ಭಾಗಗಳಲ್ಲಿ ಪದೇ ಪದೇ ಮರುಕಳಿಸುತ್ತಿರುವ ಅಹಿತಕರ ಘಟನೆಗಳನ್ನು ನಿಯಂತ್ರಿಸಲು ಹಾಗೂ ಸಾಮಾಜಿಕ ಶಾಂತಿಗೆ ಭಂಗವನ್ನುಂಟು ಮಾಡುವ ಸಮಾಜ ಘಾತುಕ ಶಕ್ತಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ನಗರ ಪೊಲೀಸ್ ಆಯುಕ್ತ ಚಂದ್ರಶೇಖರ್ ಅವರಿಗೆ ನಿರ್ದೇಶನ ನಿಡಿರುವುದಾಗಿ ತಿಳಿಸಿದ್ದಾರೆ.
ಮರುಕಳಿಸುತ್ತಿರುವ ಇಂತಹ ಅಹಿತಕರ ಘಟನೆಗಳಿಂದಾಗಿ ಜಿಲ್ಲೆಯಲ್ಲಿ ಜನರು ಭೀತಿಗೊಳಗಾಗಿದ್ದು, ಸರ್ವ ಧರ್ಮ ಮುಖಂಡರ ಸಭೆಗಳನ್ನು ಕರೆದು ಚರ್ಚಿಸಿ ಇಂತಹ ಘಟನೆಗಳು ಪುನರಾವರ್ತಿಸದಂತೆ ಕ್ರಮ ವಹಿಸಬೇಕೆಂದು ಸೂಚಿಸಿರುವುದಾಗಿ ಖಾದರ್ ತಿಳಿಸಿದ್ದಾರೆ.
Next Story





