ಐಎಸ್‌ಎಲ್: ಕೇರಳ ಬ್ಲಾಸ್ಟರ್ಸ್‌ಗೆ ಜಯ

ಕೊಚ್ಚಿ, ನ.12: ಕೊನೆಯ 5 ನಿಮಿಷಗಳ ಅಂತರದಲ್ಲಿ ಎರಡು ಗೋಲು ಬಾರಿಸಿದ ಸಿ.ಕೆ.ವಿನೀತ್ ನೆರವಿನಿಂದ ಕೇರಳ ಬ್ಲಾಸ್ಟರ್ಸ್ ತಂಡ ಚೆನ್ನೈಯಿನ್ ಎಫ್‌ಸಿ ತಂಡವನ್ನು 3-1 ಗೋಲುಗಳ ಅಂತರದಿಂದ ಮಣಿಸಿದೆ.
ಇಲ್ಲಿನ ನೆಹರೂ ಸ್ಟೇಡಿಯಂನಲ್ಲಿ ಶನಿವಾರ ನಡೆದ ಇಂಡಿಯನ್ ಸೂಪರ್ ಲೀಗ್(ಐಎಸ್‌ಎಲ್)ನಲ್ಲಿ ದಕ್ಷಿಣದ ಎದುರಾಳಿ ಚೆನ್ನೈಯಿನ್ ವಿರುದ್ಧ ಭರ್ಜರಿ ಜಯ ದಾಖಲಿಸಿತು.
ಚೆನ್ನೈಯಿನ್ ತಂಡದ ಬೆರ್ನಾರ್ಡ್ ಮೆಂಡಿ 22ನೆ ನಿಮಿಷದಲ್ಲಿ ಮುನ್ನಡೆ ಸಾಧಿಸಿದರು. ದ್ವಿತೀಯಾರ್ಧದಲ್ಲಿ ಡಿಡಿಯೆರ್ ಕಡಿಯೊ(67ನೆ ನಿಮಿಷ), ವಿನೀತ್(85ನೆ ಹಾಗೂ 89ನೆ ನಿಮಿಷ) ಗೋಲು ಬಾರಿಸಿ ಆತಿಥೇಯರಿಗೆ ಪೂರ್ಣಾಂಕ ತಂದುಕೊಟ್ಟರು.
ಕೇರಳ ತಂಡ ಚೆನ್ನೈಯಿನ್ ವಿರುದ್ಧ ಲೀಗ್ ಹಂತದಲ್ಲಿ ಈ ತನಕ ಜಯ ಸಾಧಿಸಿಲ್ಲ. ಒಟ್ಟು 15 ಅಂಕ ಗಳಿಸಿರುವ ಕೇರಳ ಅಂಕಪಟ್ಟಿಯಲ್ಲಿ 2ನೆ ಸ್ಥಾನಕ್ಕೇರಿದೆ.
Next Story





