ಹಾಸನ: ಬ್ಯಾಂಕ್, ಎಟಿಎಂನಲ್ಲಿ ಹಣಕ್ಕಾಗಿ ಮುಗಿ ಬಿದ್ದ ಗ್ರಾಹಕರು
ರಸ್ತೆಗೆ ಬಂದ ಸರತಿ ಸಾಲು
.jpg)
ಹಾಸನ,ನ.12: ಬ್ಯಾಂಕಿನಲ್ಲಿ ಹಳೆ ನೋಟುಗಳನ್ನು ದಿಡೀರ್ ಬ್ಯಾನ್ ಮಾಡಿದ ಹಿನ್ನಲೆಯಲ್ಲಿ ವಿವಿಧ ಕೆಲಸಗಳಿಗೆ ಹಣ ಪಡೆಯಲು ಗ್ರಾಹಕರು ಎಟಿಎಂ ಹಾಗೂ ಬ್ಯಾಂಕುಗಳಲ್ಲಿ ಸರತಿ ಸಾಲಿನಲ್ಲಿ ನಿಂತು ಕಾಯಬೇಕಾಯಿತು.
ನಗರದ ಕೆ.ಆರ್. ಪುರಂ ರಸ್ತೆ ಬಳಿ ಇರುವ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಬ್ಯಾಂಕ್ ಮುಂದೆ ಜನರ ಸಾಲು ಬ್ಯಾಂಕಿನಿಂದ ರಸ್ತೆಯವರೆಗೂ ಸಾಲು ಮುಟ್ಟಿತ್ತು. ಈ ವೇಳೆ ಕೆಲ ಗ್ರಾಹಕರು ಮುಂದೆ ಹೋಗಲು ಪ್ರಯತ್ನಿಸಿ ಅವಾಚ್ಯ ಪದಗಳಿಂದ ಜೋರಾಗಿ ಮಾತನಾಡುವುದು ಸಾಮಾನ್ಯವಾಗಿತ್ತು. ಎಂ.ಜಿ. ರಸ್ತೆ ಬಳಿ ಇರುವ ವಿಜಯ ಬ್ಯಾಂಕಿನಲ್ಲಿಯೂ ಕೂಡ ರಸ್ತೆಗೆ ಕ್ಯೂ ಇರುವುದು ಕಂಡು ಬಂದಿತು. ನಗರದ ಹೃಯ ಭಾಗದಲ್ಲಿರುವ ಎನ್.ಆರ್. ವೃತ್ತದ ಬಳಿ ಇರುವ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಬ್ಯಾಂಕ್ ಮುಖ್ಯ ಶಾಖೆಯಲ್ಲಂತು ಎಟಿಎಂನಲ್ಲಿ ಹಣ ಪಡೆಯಲು ದೊಡ್ಡ ಸಾಲಿನಲ್ಲಿ ಜನರು ನಿಂತಿದ್ದರು. ಕೆಲ ಸಮಯದಲ್ಲೆ ಹಣ ಖಾಲಿಯಾಗಿ ಮತ್ತೆ ಹಣವನ್ನು ಸಿಬ್ಬಂದಿಯವರು ತುಂಬುತ್ತಿದ್ದರು. ಆಗೇ ಬ್ಯಾಂಕಿಗೆ ಹಣ ಕಟ್ಟುವ ಮತ್ತು ಪೆಯುವ ಸಾಲು ಕೂಡ ಹನುಮಂತನ ಬಾಲದಂತೆ ಸುತ್ತಿಕೊಂಡಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪೆಉ ಹಣ ತರುವುದಕ್ಕೆ ಬ್ಯಾಂಡೆಜ್ ಸಮೇತ ರೋಗಿಗಳು ಬಂದಿದ್ದರು. ವಯಸ್ಸಾದವರು ಬಿಸಿನಲ್ಲಿ ನಿಂತಿದ್ದರು. ಗೌರಿಕೊಪ್ಪಲಿನಲ್ಲಿರುವ ಕೆನರಾ ಬ್ಯಾಂಕ್‌ನಲ್ಲೂ ಕೂಡ ಗ್ರಾಹಕರು ಹಣ ಕಟ್ಟಲು ಮತ್ತು ಪಡೆಯಲು ಮುಗಿ ಬಿದ್ದಿದ್ದರು.
ಬ್ಯಾಂಕಿನ ಮುಂದೆ ಸರದಿ ಸಾಲಿನಲ್ಲಿ ಗಂಟೆ ಗಟ್ಟಲೆ ನಿಂತು ನಂತರ ವಾಪಸ್ ಮನೆಗೆ ತೆರಳುತ್ತಿದ್ದ ಗ್ರಾಹಕನೊಬ್ಬ ಸುದ್ದಿಗಾರೊಂದಿಗೆ ತಮ್ಮ ಕಷ್ಟಗಳನ್ನು ಹಂಚಿಕೊಂರು. "ನಮ್ಮ ಬಳಿ ಇದ್ದ ಹಣವನ್ನೆಲ್ಲಾ ಬ್ಯಾಂಕಿಗೆ ಹಾಕುತ್ತಿದ್ದೆ. ಬೇಕಾದಾಗ ಎಟಿಎಂ ಮೂಲಕ ಪಡೆಯುತ್ತಿದ್ದೆನು. ಆದರೇ ಕಳೆದ ಮೂರ್ನಾಲ್ಕು ದಿನಗಳಿಂದ ಹಣ ಸಿಗದೆ ಪರದಾಬೇಕಾಗಿದೆ. ಇಂದು ಊಟಕ್ಕು ಕೂಡ ನಮ್ಮ ಬಳಿ ಹಣವಿಲ್ಲ. ಮನೆಯಲ್ಲಿರುವ ಉಪ್ಪು ಕಾರ ಹಾಕಿಕೊಂಡು ಊಟ ಮಾಡುವೆ" ಎಂದು ನೊಂದು ಹೇಳಿಕೊಂಡರು.







