ನೋಟು ಅಮಾನ್ಯದ ಬಗ್ಗೆ 15 ದಿನ ಮೊದಲೇ ಲೇಖನ ಪ್ರಕಟ!
ಲಕ್ನೋ, ನ.12: ಅಧಿಕ ವೌಲ್ಯದ ನೋಟುಗಳನ್ನು ಅಮಾನ್ಯಗೊಳಿಸುವ ವಿಷಯ ಅತ್ಯಂತ ರಹಸ್ಯವಾಗಿದ್ದು ಕೆಲವೇ ಮಂದಿಗೆ ತಿಳಿದಿತ್ತು ಎಂದು ಕೇಂದ್ರ ಸರಕಾರ ನಾನು ಈ ರೀತಿ ಮಾಡುವಂತಿಲ್ಲ. ಆದರೆ ಸುದೀರ್ಘ ಕಾಲದ ಮಾಹಿತಿ ಮೂಲಗಳಿಂದ ಈ ವಿಷಯ ತಿಳಿದು ಬಂದಿದೆ ಎಂದಷ್ಟೇ ತಿಳಿಸಿದರು. ಹೇಳಿಕೊಂಡಿದೆ. ಆದರೆ ಈ ಬಗ್ಗೆ ಕಾನ್ಪುರ ಮೂಲದ ಹಿಂದಿ ಪತ್ರಕರ್ತನೋರ್ವ 15 ದಿನಗಳ ಹಿಂದೆಯೇ ಲೇಖನ ಬರೆದಿದ್ದ ವಿಷಯ ಬಹಿರಂಗಗೊಂಡಿದೆ. ಹಿಂದಿ ದಿನಪತ್ರಿಕೆ ‘ದೈನಿಕ್ ಜಾಗರಣ್’ನ ಪತ್ರಕರ್ತ ಬೃಜೇಶ್ ದುಬೆ ಎಂಬವರು ಅಕ್ಟೋಬರ್ 27ರ ಸಂಚಿಕೆಯಲ್ಲಿ, ಕೇಂದ್ರ ಸರಕಾರ ನೋಟುಗಳನ್ನು ಬದಲಿಸಿ 2000 ರೂ. ಮುಖಬೆಲೆಯ ನೋಟುಗಳನ್ನು ಚಲಾವಣೆಗೆ ತರಲಿದೆ ಎಂದು ತಮ್ಮ ಲೇಖನದಲ್ಲಿ ಬರೆದಿದ್ದರು. ಸುಮಾರು ಹನ್ನೆರಡು ದಿನಗಳ ಬಳಿಕ, ಅಂದರೆ ನ.8ರಂದು ಪ್ರಧಾನಿ ಮೋದಿ 500 ಮತ್ತು 1000 ರೂ. ಮುಖಬೆಲೆಯ ಕರೆನ್ಸಿ ನೋಟುಗಳನ್ನು ಅಮಾನ್ಯಗೊಳಿಸಿ, 2000 ರೂ. ಮುಖಬೆಲೆಯ ಹೊಸ ನೋಟು ಚಲಾವಣೆಗೆ ತರುವ ಬಗ್ಗೆ ಘೋಷಣೆ ಮಾಡಿದ್ದರು. ಈ ಘೋಷಣೆ ಹೊರ ಬೀಳುತ್ತಿದ್ದಂತೆಯೇ ಬೃಜೇಶ್ ದುಬೆಯ ಮಿತ್ರರು ದೂರವಾಣಿ ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ. ಈ ಬಗ್ಗೆ ಐಎಎನ್‌ಎಸ್ ಅವರನ್ನು ದೂರವಾಣಿಯಲ್ಲಿ ಸಂಪರ್ಕಿಸಿದಾಗ , ಈ ಲೇಖನ ಬರೆಯಲು ಎಲ್ಲಿಂದ ಮಾಹಿತಿ ದೊರೆತಿದೆ ಎನ್ನುವುದನ್ನು ತಿಳಿಸಲು ದುಬೆ ಒಪ್ಪಲಿಲ್ಲ. ಪತ್ರಿಕಾ ಧರ್ಮದ ಪ್ರಕಾರ
ಇದೊಂದು ಮಾಮೂಲಿ ಲೇಖನ ಎಂದೇ ಭಾವಿಸಲಾಗಿತ್ತು. ನ.8ರಂದು ಪ್ರಧಾನಿ ಮೋದಿ ನೋಟು ಅಮಾನ್ಯದ ವಿಷಯ ಘೋಷಿಸುವವರೆಗೂ ಓದುಗರು, ಸಹೋದ್ಯೋಗಿಗಳೂ ಸೇರಿದಂತೆ ಯಾರೂ ಈ ಬಗ್ಗೆ ಹೆಚ್ಚಿನ ಆಸಕ್ತಿ ತೋರಿರಲಿಲ್ಲ. ತನ್ನ ಹೆಸರಿನಲ್ಲಿ ಪ್ರಕಟವಾದ ಲೇಖನದ ವಿಷಯವನ್ನು ಸರಕಾರ ಖಚಿತಪಡಿಸಿದಾಗ ಎಲ್ಲೆಡೆಯ ಓದುಗರಿಂದ ಪ್ರಶಂಸೆಯ ಸುರಿಮಳೆ ಆಯಿತು ಎಂದು ಖುಷಿಯಿಂದ ದುಬೆ ಹೇಳಿಕೊಂಡರು. ಆದರೆ ರಿಸರ್ವ್ ಬ್ಯಾಂಕ್‌ನ ನೂತನ ಗವರ್ನರ್ ಉರ್ಜಿತ್ ಪಟೇಲ್ ಅವರ ಅಧ್ಯಕ್ಷತೆಯಲ್ಲಿ ಕಾನ್ಪುರದಲ್ಲಿ ಅಕ್ಟೋಬರ್ 20ರಂದು ನಡೆದ ಸಭೆಯಲ್ಲಿ ಭಾಗವಹಿಸಿದ ಓರ್ವರಿಂದ ಈ ಮಾಹಿತಿ ದುಬೆಗೆ ದೊರೆತಿದೆ ಎಂದು ಪತ್ರಿಕೆಯ ಮೂಲಗಳು ತಿಳಿಸಿವೆ.
ನೋಟು ಅಮಾನ್ಯಗೊಳಿಸುವ ಕೇಂದ್ರ ಸರಕಾರದ ನಿರ್ಧಾರ ಬಿಜೆಪಿ ಮತ್ತದರ ಮಿತ್ರಪಕ್ಷಗಳಿಗೆ ಮೊದಲೇ ತಿಳಿದಿತ್ತು ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್ ಹಾಗೂ ಇತರ ವಿಪಕ್ಷ ನಾಯಕರು ಟೀಕಿಸಿರುವುದನ್ನು ಇಲ್ಲಿ ಉಲ್ಲೇಖಿಸಬಹುದಾಗಿದೆ.





