ಮೈದಾ ಹಿಟ್ಟು ಆಹಾರ ಯೋಗ್ಯವೇ?

ಬಾಯಿಗೆ ತುಂಬಾ ರುಚಿ ನೀಡುವ, ಮೃದುವಾಗಿರುವ ಹಾಗೂ ತಯಾರಿಕೆಗೆ ಸುಲಭವಾದ ‘ಮೈದಾ’ ಎಂಬ ಬಿಳಿ ಹಿಟ್ಟು ಇಲ್ಲದೆ ಆಹಾರ ತಯಾರಿಕೆಯೇ ಅಪೂರ್ಣ ಎನ್ನುವಂತಿದೆ ಸದ್ಯದ ಸ್ಥಿತಿ. ಆದರೆ ಈ ಮೈದಾ ಹಿಟ್ಟನ್ನು ಯಾವುದರಿಂದ ಮತ್ತು ಹೇಗೆ ತಯಾರಿಸುತ್ತಾರೆ ಎಂಬುದು ಹೆಚ್ಚಿನವರಿಗೆ ತಿಳಿದಿಲ್ಲ. ಇದರ ಬಗ್ಗೆ ಒಂದಿಷ್ಟಾದರೂ ತಿಳಿಯುವುದು ಉತ್ತಮ.
ನಾವು ದಿನನಿತ್ಯ ತಿನ್ನುತ್ತಿರುವ ಆಹಾರ ವಸ್ತುಗಳಲ್ಲಿ ಮೈದಾದಿಂದ ತಯಾರಿಸಿದ ತಿಂಡಿಗಳು ನಾನಾ ರೀತಿಯಲ್ಲಿರಬಹುದು. ಅವುಗಳಲ್ಲಿ ಪರೋಟ, ರೋಟಿ, ಫಿಜ್ಜಾ, ಬರ್ಗರ್, ಪಫ್ಸ್, ಪೂರಿ ಇತ್ಯಾದಿಗಳನ್ನು ಹೊಟೇಲ್‌ಗಳಲ್ಲೂ ಮನೆಗಳಲ್ಲೂ ತಯಾರಿಸುತ್ತಾರೆ. ಅಲ್ಲದೆ ಬೇಕರಿಗಳಲ್ಲಿ ದೊರಕುವಂತಹ ಹೆಚ್ಚಿನ ತಿಂಡಿಗಳಾದ ಕೇಕ್ ಹಾಗೂ ಸಿಹಿತಿಂಡಿಗಳೂ ಮೈದಾದಿಂದ ತಯಾರಿಸಿದವುಗಳಾಗಿವೆ. ಬಾಯಿಗೆ ತುಂಬಾ ರುಚಿ ನೀಡುವ, ಮೃದುವಾಗಿರುವ ಹಾಗೂ ತಯಾರಿಕೆಗೆ ಸುಲಭವಾದ ‘ಮೈದಾ’ ಎಂಬ ಬಿಳಿ ಹಿಟ್ಟು ಇಲ್ಲದೆ ಆಹಾರ ತಯಾರಿಕೆಯೇ ಅಪೂರ್ಣ ಎನ್ನುವಂತಿದೆ ಸದ್ಯದ ಸ್ಥಿತಿ. ಆದರೆ ಈ ಮೈದಾ ಹಿಟ್ಟನ್ನು ಯಾವುದರಿಂದ ಮತ್ತು ಹೇಗೆ ತಯಾರಿಸುತ್ತಾರೆ ಎಂಬುದು ಹೆಚ್ಚಿನವರಿಗೆ ತಿಳಿದಿಲ್ಲ. ಇದರ ಬಗ್ಗೆ ಒಂದಿಷ್ಟಾದರೂ ತಿಳಿಯುವುದು ಉತ್ತಮ.
ಗೋಧಿಯ ಸಂಸ್ಕರಿಸಿದ (refined) ರೂಪವೇ ಮೈದಾ ಹಿಟ್ಟು. ಗೋಧಿ ಕಾಳನ್ನು ಸಾಮಾನ್ಯವಾಗಿ ಆಂತರಿಕ ಹಾಗೂ ಬಾಹ್ಯವಾಗಿ ಮೂರು ವಿಧಗಳಾಗಿ ವಿಂಗಡಿಸಲಾಗಿದೆ 1.ಬ್ರಾನ್ (bran), ನಾರು (fiber) ಸಹಿತವಾದ ಅತ್ಯಧಿಕ ಪೋಷಕಾಂಶ ಹಾಗೂ ಜೀವಸತ್ವ, ಮೇದಾಮ್ಲ (fatty acid), ಖನಿಜಗಳು ಸಮೃದ್ಧವಾಗಿ ಕೂಡಿದ ಗಟ್ಟಿಯಾದ ಚಿಕ್ಕದಾದ ಹೊರಗಿನ ಭಾಗವಾಗಿದೆ 2.ಜರ್ಮ್ (germ) ಇದು ಗೋಧಿಯ ಒಳಗಿನ ಭಾಗವಾಗಿದ್ದು ಮೊಳಕೆಯೊಡೆಯಲು ಸಹಾಯವಾಗುವಂತಹ ವಿಟಮಿನ್ ಈ ಫೋಲಿಕ್ ಆ್ಯಸಿಡ್ ಅಗತ್ಯ ಪೋಷಕಾಂಶಗಳ ಸಾಂದ್ರೀಕೃತ ಮೂಲವಾಗಿವೆ. 3.ಎಂಡೋಸ್ಪರ್ಮ್ (endosperm) ಈ ಭಾಗವು ಅತ್ಯಧಿಕ ದೊಡ್ಡದಾಗಿದ್ದು ಶೇ. 80ಕ್ಕಿಂತ ಹೆಚ್ಚು ಪಿಷ್ಟ ಹಾಗೂ ಕಾರ್ಬೋಹೈಡ್ರೇಟ್‌ನಿಂದ ಆವರ್ತಿಸಿಗೊಂಡ ಭಾಗವಾಗಿದೆ. ಆಧುನಿಕ ತಂತ್ರಜ್ಞಾನದಿಂದ ಕೂಡಿದ ಗಿರಣಿಗಳಲ್ಲಿ ಆಯಾಯ ಭಾಗಗಳನ್ನು ಬೇರ್ಪಡಿಸಿ ಮಾರುಕಟ್ಟೆಗೆ ನೀಡಲ್ಪಡುತ್ತದೆ. ಇವುಗಳಲ್ಲಿ ಅತ್ಯಂತ ಸಂಸ್ಕರಿಸಲ್ಪಟ್ಟ ಹಾಗೂ ಕೊನೆಯ ಉತ್ಪಾದನೆಯಾಗಿದೆ ಮೈದಾ. ಇವುಗಳನ್ನು ಎರಡು ವಿಧಗಳಾಗಿ ವಿಂಗಡಿಸಲಾಗಿದ್ದು ಬಿಳುಪಾಗಿಸಿದ ಮತ್ತು ಹಳದಿಮಿಶ್ರಿತ ಬಿಳಿಬಣ್ಣದಿಂದ ಕೂಡಿದ್ದು ಇವುಗಳು ಕೆಲವೇ ಉತ್ಪನ್ನಗಳಿಗೆ ಮಾತ್ರ ಸೀಮಿತವಾಗಿದೆ. ಬಿಳುಪಾಗಿಸಿದ ಮೈದಾವು ಯಥೇಚ್ಛವಾಗಿ ಮರುಕಟ್ಟೆಯಲ್ಲಿ ಬಹುತೇಕ ಲಭ್ಯವಿದೆ. ಬಿಳುಪಾಗಿಸುವ ಹಾಗೂ ನುಣುಪಾಗಿಸುವ ವಿಧಾನಕ್ಕೆ ಕೆಲವೊಂದು ರಾಸಾಯನಿಕ ವಸ್ತುಗಳನ್ನು ಸೇರಿಸಲಾಗುತ್ತದೆ ಅವುಗಳಲ್ಲಿ ಬೆಂರೆಯಿಕ್ ಪರಾಕ್ಸೈಡ್ ಹಾಗೂ ಅಲೆಕ್ಸಾನ್ ಮುಖ್ಯವಾದವು. ಅಲೆಕ್ಸಾನ್ ಬಿಳಿಯಾದ ಹುಡಿಯಾಗಿದ್ದು ಇದು ನಮ್ಮ ದೇಹದ ಆಂತರಿಕ ಭಾಗವಾದ ಮೇದೋಜೀರಕ (ಪ್ಯಾಂಕ್ರಿಯಾಸ್)ಗ್ರಂಥಿಯನ್ನು ಮೆಲ್ಲ ಮೆಲ್ಲನೆ ಹಾನಿಮಾಡುವಂತಹ ವಿಷಕಾರಿ ರಾಸಾಯನಿಕ ವಸ್ತುವಾಗಿದೆ. ಮೇದೋಜೀರಕ ಗ್ರಂಥಿಯು ಇನ್ಸುಲಿನ್ ಉತ್ಪತ್ತಿ ಮಾಡಿ ನಮ್ಮ ದೇಹದ ರಕ್ತದಲ್ಲಿ ಗ್ಲುಕೋಸ್ ಮತ್ತು ಸಕ್ಕರೆಯ ಮಟ್ಟವನ್ನು ಸಮತೋಲನದಲ್ಲಿರಿಸುವಂತಹ ಪ್ರಮುಖ ಕಾರ್ಯವೆಸಗುತ್ತದೆ. ಏಕೆಂದರೆ ಅಲೆಕ್ಸಾನ್ (allexan ) ಮತ್ತು ಸಕ್ಕರೆಕಾಯಿಲೆಗೆ ನಂಟು ಇರುವ ಬಗ್ಗೆ ವಿಜ್ಞಾನಿಗಳು ಈ ಹಿಂದೆಯೇ ಹಲವಾರು ಸಂಶೋಧನೆ ಹಾಗೂ ಪ್ರಯೋಗಗಳಿಂದ ಸಾಬೀತುಪಡಿಸಿದ್ದಾರೆ. ಕೆಲವೊಂದು ಪ್ರಾಣಿಗಳಾದ ಇಲಿ, ಮೊಲಗಳಿಗೆ ಅಲೆಕ್ಸಾನನ್ನು ಚುಚ್ಚುಮದ್ದು ಹಾಗೂ ಆಹಾರ ರೂಪದಲ್ಲಿ ನೀಡಿ ಪ್ರಯೋಗ ನಡೆಸಿದಾಗ ಇವುಗಳಲ್ಲಿ ಡಯಾಬಿಟಿಸ್ ಸ್ವರೂಪ ಕಂಡುಬಂದಿದ್ದು ತಿಳಿದುಬಂದಿದೆ. ಡಯಾಬಿಟಿಸ್ 1 ಮತ್ತು 2 ತರದ ಸಮಸ್ಯೆಗಳು ಮಾನವನಲ್ಲೂ ತಲೆದೋರಬಹುದೆಂದು ಖಚಿತಪಡಿಸಿದ್ದಾರೆ.
ಡಯಾಬಿಟಿಸ್ ಕೆಲವು ಕಾರಣಗಳಿಂದ ಬರಬಹುದು. ಅವುಗಳಲ್ಲಿ ವಂಶವಾಹಿನಿ ಆನುವಂಶಿಕತೆ ಹಾಗೆ ಅಲೆಕ್ಸಾನ್ ಹಾಗೂ ಬೆಂರೆಯಿಕ್ ಆಕ್ಸೈಡ್‌ನಂತಹ ರಾಸಾಯನಿಕ ಹಾನಿಕಾರಕ ವಸ್ತುವಿನ ದೀರ್ಘಕಾಲದ ಬಳಕೆಯಿಂದ ಮೇದೋಜೀರಕಾಂಗದ ಮೇಲೆ ದುಷ್ಪರಿಣಾಮ ಬೀರಿ ಬೀಟಾ ಸೆಲ್‌ಗಳನ್ನು ನಿಷ್ಕ್ರಿಯಗೊಳಿಸಿ ಮೇದೋಜೀರಕಾಂಗದ ವೈಫಲ್ಯಕ್ಕೆ ಕಾರಣವಾಗುತ್ತದೆ. ಅಂದರೆ ನಾವೇ ನಮ್ಮ ಕೈಯಾರೆ ಸಕ್ಕರೆ ಕಾಯಿಲೆಯನ್ನು ಆಹ್ವಾನಿಸಿದಂತಾಯಿತು. ಕೆಲವರು ಮೈದಾದಿಂದ ತಯಾರಿಸಿದ ಪರೋಟಗಳು, ನಾನ್ ರೋಟಿಗಳು, ಸಕ್ಕರೆ ಕಾಯಿಲೆ ಹಾಗೂ ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಉತ್ತಮವೆಂದು ತಪ್ಪು ತಿಳುವಳಿಕೆಯಿಂದ ಸಾಂಪ್ರದಾಯಿಕ ಹಾಗೂ ದೈನಂದಿನ ಆಹಾರವಾಗಿ ಸೇವಿಸಿರುತ್ತಾರೆ. ಇದರಿಂದ ಅರೋಗ್ಯ ಕೆಟ್ಟು ಇನ್ನಿತರ ಸಮಸ್ಯೆಗಳಾದ ಬೊಜ್ಜು, ಹೃದಯದ ಅಪಧಮನಿಗಳಲ್ಲಿ ಕೊಬ್ಬು ಶೇಖರಣೆ ಮುಂತಾದವು ತಲೆದೋರಬಹುದು ಇಂತಹ ವಿಷಪೂರಿತವಾಗಿರುವ ಅಲೆಕ್ಸಾನ್ ಈಗಾಗಲೇ ಅಮೆರಿಕ ಹಾಗೂ ಕೆಲವು ಪಾಶ್ಚಾತ್ಯ ರಾಷ್ಟ್ರಗಳಲ್ಲಿ ನಿಷೇಧಿಸಲ್ಪಟ್ಟಿದೆ. ಆದರೆ ನಮ್ಮ ದೇಶದಲ್ಲಿ ಮೈದಾ ಬಳಕೆಗೇನು ಅಡ್ಡಿಯಿಲ್ಲ ಮಾತ್ರವಲ್ಲ ಕೆಲವು ಕಾರ್ಪೊರೇಟ್ ಲಾಬಿಗಳು ಹಾಗೂ ಮೈದಾ ಉತ್ಪಾದಕರು ಜನಸಾಮಾನ್ಯರ ಪ್ರಾಣದೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ.
ಇತ್ತೀಚೆಗೆ ಮಾಧ್ಯಮಗಳು ಪ್ರಕಟಿಸಿದಂತೆ ಕೆ. ರಾಜೇಂದ್ರನ್ ಎಂಬವರು ತನ್ನ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯಲ್ಲಿ ಅಲೆಕ್ಸಾನ್ ಭರಿತ ಉತ್ಪಾದನೆ, ಮಾರುಕಟ್ಟೆ, ಬಳಕೆ ಈ ಮೂರನ್ನೂ ಸಂಪೂರ್ಣ ನಿಷೇಧವನ್ನು ಕೋರಿ ಅದರ ಮೇಲೆ ಕ್ರಮ ತೆಗೆದುಕೊಳ್ಳಬೇಕಾಗಿ ನ್ಯಾಯಾಲಯಕ್ಕೆ ಅರ್ಜಿಸಲ್ಲಿಸಿದ್ದು ಇದು ಈಗಾಗಲೇ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ. ಇಂತಹ ಹಾನಿಕಾರಕ ರಾಸಾಯನಿಕ ವಸ್ತುಗಳನ್ನೊಳ ಗೊಂಡ ಮೈದಾ ಹಿಟ್ಟು ಶೇ.100 ಕಾರ್ಬೊಹೈಡ್ರೇಟ್‌ನಿಂದ ಕೂಡಿದ್ದು ಇವುಗಳಿಂದ ತಯಾರಿಸಿದ ಆಹಾರ ಉತ್ಪನ್ನಗಳ ನಿರಂತರ ಸೇವನೆಯಿಂದ ಮಕ್ಕಳು, ಹದಿಹರೆಯದವರು, ವಯಸ್ಕರು ಮತ್ತು ವೃದ್ಧರೆಂಬ ಭೇದಭಾವವಿಲ್ಲದೆ ಅರೋಗ್ಯದ ಮೇಲೆ ದುಷ್ಪರಿಣಾಮಬೀರುವುದರಲ್ಲಿ ಸಂಶಯವಿಲ್ಲ.





