ಟಿಪ್ಪುವಿನ ಹೋರಾಟ ಪ್ರಸ್ತುತ ಭಾರತಕ್ಕೆ ಮತ್ತೊಮ್ಮೆ ಅಗತ್ಯವಿದೆ: ಸಲೀಂ ಗುರುವಾಯನಕೆರೆ
ಸೌದಿ ಅರೇಬಿಯಾ: 'ಟಿಪ್ಪುಸ್ಮರಣೆ ಮತ್ತು ಕಾಲಘಟ್ಟದ ಬೇಡಿಕೆ' ಉಪನ್ಯಾಸ

ಕಮೀಸ್ ಮುಶೈತ್, ನ.13: ಟಿಪ್ಪು ಸಾಮ್ರಾಜ್ಯ ಶಾಹಿಗಳ ವಿರುದ್ಧ ಯಾವುದೇ ರಾಜಿ ಇಲ್ಲದ ಹೋರಾಡಿ ತನ್ನ ಉದ್ದೇಶ ಸಾಧನೆಗೋಸ್ಕರ ಪ್ರಾಣತ್ಯಾಗ ಮಾಡಿದ್ದಾರೆ .ಅವರು ತನ್ನ ಆಡಳಿತಾವಧಿಯಲ್ಲಿ ಓರ್ವ ಮಾದರಿ ಆಡಳಿತಗಾರನಾಗಿ ಇತಿಹಾಸ ನಿರ್ಮಿಸಿದ್ದಲ್ಲದೆ ತನ್ನ ಮಂತ್ರಿ ಮಂಡಲದಲ್ಲಿ ದಿವಾನ್ ಕೃಷ್ಣರಾವ್ , ದಿವಾನ್ ಪೂರ್ಣಯ್ಯರಂತಹ ಏಳು ಮಂದಿ ಹಿಂದೂ ಸಮುದಾಯದ ಮಂತ್ರಿಗಳಿಗೆ ಅವಕಾಶ ನೀಡಿದ್ದಾನೆ. ಟಿಪ್ಪುವಿನ ಹೋರಾಟವನ್ನು ಮತ್ತೊಮ್ನೆ ಭಾರತದಲ್ಲಿ ಮುಂದುವರಿಸುವ ಅನಿವಾರ್ಯತೆ ಬಂದೊದಗಿದೆ ಎಂದು ಸಲೀಂ ಗುರುವಾಯನಕೆರೆ ಅಭಿಪ್ರಾಯಪಟ್ಟರು.
ಇವರು ಕಮೀಸ್ ಮುಶೈತ್ ನಲ್ಲಿ ಇಂಡಿಯಾ ಪ್ರೆಟರ್ನಿಟಿ ಫೋರಂ, ಅಭಾ ಕರ್ನಾಟಕ ವತಿಯಿಂದ ನಡೆದ 'ಟಿಪ್ಪು ಸುಲ್ತಾನ್ ಸ್ಮರಣೆ ಮತ್ತು ಕಾಲಘಟ್ಟದ ಬೇಡಿಕೆ' ಎಂಬ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಲ್ಲಿಕೋಟೆಯ ವೆಂಕಟೇಶ್ವರ ಮಂದಿರಕ್ಕೆ ಭೂಮಿದಾನ ನೀಡಿದ್ದು, ತನ್ನ ಅರಮನೆಯ ಪ್ರದೇಶಗಳಲ್ಲಿ ಶ್ರೀರಂಗನಾಥ ದೇವಾಲಯ ನಿರ್ಮಿಸಲು ಅನುವು ಮಾಡಿಕೊಟ್ಟಿರುವುದು ಅವರೊಬ್ಬ ಜಾತ್ಯತೀತ ರಾಜ ಎಂಬುದನ್ನು ಬಿಂಬಿಸುತ್ತದೆ ಎಂದು ಹೇಳಿದರು. ಫ್ರಾನ್ಸ್ ನಿಂದ ರೇಷ್ಮೆಯನ್ನು ಭಾರತಕ್ಕೆ ಪ್ರಥಮವಾಗಿ ಪರಿಚಯಿಸಿದ್ದಲ್ಲದೆ ವೈಜ್ಞಾನಿಕವಾಗಿ ಕ್ಷಿಪಣಿಯನ್ನು ಜಗತ್ತಿಗೆ ಪ್ರಥಮವಾಗಿ ಪರಿಚಯಿಸಿದ್ದು,ಕೆಅರ್ಎಸ್ ಗೆ ಅಣೆಕಟ್ಟು ನಿರ್ಮಿಸುವ ಯೋಜನೆ ಟಿಪ್ಪು ಸುಲ್ತಾನ್ ಕನಸಾಗಿತ್ತು ಎಂದರು.
ಪ್ರಸಕ್ತ ಭಾರತದಲ್ಲಿ ಟಿಪ್ಪುವಿನ ಕಾಲದಲ್ಲಿದ್ದ ಅದೇ ಸಾಮ್ರಾಜ್ಯ ಶಾಹಿತ್ವವು ನಾನಾ ರೀತಿಯಲ್ಲಿ ಮುಂದುವರಿಯುತ್ತಿದ್ದು ಇದನ್ನು ಮರೆಮಾಚಲು ಸಾಮಾನ್ಯ ಜನರ ಮುಂದೆ ಕೋಮುವಾದದ ವಿಷ ಬೀಜವನ್ನು ಬಿತ್ತುತ್ತಿದ್ದು ಇದು ಅತ್ಯಂತ ಅಪಾಯಕಾರಿ ಎಂದು ವಿಷಾದಿಸಿದರು.
ಇಂಡಿಯನ್ ಪ್ರೆಟರ್ನಿಟಿ ಪೋರಂ ಅಭಾ ಕರ್ನಾಟಕ ವಲಯ ಅಧ್ಯಕ್ಷ ತನ್ವೀರ್ ಮೈಂದಾಳ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಇಂಡಿಯನ್ ಸೋಷಿಯಲ್ ಪೋರಂನ ಮುಖಂಡ ಕೋಯರವರು ನೆರವೇರಿಸಿದರು
ಸುಮಾರು ಇಪ್ಪತ್ತೈದು ವರ್ಷಗಳಿಂದ ಕಮೀಸ್ ಮುಶೈತ್ ನಲ್ಲಿ ಅನಿವಾಸಿ ಭಾರತೀಯರಿಗೆ ನೀಡಿದ ಸೇವೆಯನ್ನು ಗುರುತಿಸಿ ಹನೀಫ್ ಮಂಜೇಶ್ವರ ಹಾಗೂ ಬಾವಾಕ ಮುಡಿಪುರವರನ್ನು ಸನ್ಮಾನಿಸಿ ಸ್ಮರಣಿಕೆ ನೀಡಲಾಯಿತು.
ಇಂಡಿಯನ್ ಪ್ರೆಟರ್ನಿಟಿ ಪೋರಂ ಕಾರ್ಯದರ್ಶಿ ಸಾದಿಕ್ ಉಳ್ಳಾಲ್ ಸ್ವಾಗತಿಸಿದರು, ಸ್ವಾಲಿಹ್ ವಂದಿಸಿದರು. ಕಾರ್ಯಕ್ರಮದಲ್ಲಿ ಕಮೀಸ್ ಮುಶೈತ್ ,ಜೀಶಾನ್ ಪರಿಸರದ ಅನಿವಾಸಿ ಭಾರತೀಯರು ಉಪಸ್ಥಿತರಿದ್ದರು.
ವರದಿ: ಶಾಹುಲ್ ಹಮೀದ್ ಕಾಶಿಪಟ್ಣ







