ಝುಕೆರ್ ಬರ್ಗ್ ಪ್ರಕಾರ ಎಫ್ಬಿಯಲ್ಲಿ ಎಷ್ಟು ಸತ್ಯ? ಎಷ್ಟು ಫೇಕ್?
ಫೇಸ್ಬುಕ್ ನಲ್ಲಿ ಫೇಕ್ ಸುದ್ದಿ ಪ್ರಸಾರ ಆರೋಪ

ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಮೇಲೆ ಪ್ರಭಾವ ಬೀರಿದ ಸುಳ್ಳುಸುದ್ದಿಗಳು ಫೇಸ್ಬುಕ್ ನಲ್ಲಿ ಪ್ರಕಟವಾಗಿವೆ ಎಂಬ ಆರೋಪದ ಬಗ್ಗೆ ಫೇಸ್ಬುಕ್ ಮುಖ್ಯಸ್ಥ ಮಾರ್ಕ್ ಝುಕೆರ್ ಬರ್ಗ್ ಸ್ಪಷ್ಟನೆ ನೀಡಿದ್ದಾರೆ.
ನಮ್ಮ ಧ್ಯೇಯ ಒಬ್ಬ ವ್ಯಕ್ತಿಗೆ ಧ್ವನಿ ನೀಡುವುದು. ಜನರ ಬಗ್ಗೆ ನಮಗೆ ನಂಬಿಕೆ ಇದೆ. ಜನರು ತಮ್ಮ ಜೀವನಕ್ಕೆ ಯಾವುದು ಮುಖ್ಯ ಎಂದು ಅರ್ಥ ಮಾಡಿಕೊಳ್ಳುತ್ತಾರೆ ಮತ್ತು ಅವರು ವ್ಯಕ್ತಪಡಿಸುವ ಅಭಿಪ್ರಾಯಗಳು ತಮ್ಮ ಸಮುದಾಯದ ಮೇಲೆ ಮಾತ್ರವಲ್ಲದೇ ಇಡೀ ಪ್ರಜಾಪ್ರಭುತ್ವದ ಮೇಲೆ ಸಮಗ್ರವಾಗಿ ಪರಿಣಾಮ ಬೀರುತ್ತದೆ ಎಂಬ ನಂಬಿಕೆಯಿಂದ ಜನ ಕೆಲವೊಮ್ಮೆ ತಪ್ಪು ಎನಿಸುವ ಅಂಶಗಳನ್ನೂ ಬಿಂಬಿಸುತ್ತಾರೆ.
ಚುನಾವಣೆ ಬಳಿಕ ಹಲವು ಮಂದಿ, ಸುಳ್ಳು ಸುದ್ದಿಗಳು ಫಲಿತಾಂಶದ ಮೇಲೆ ಪ್ರಭಾವ ಬೀರಿವೆಯೇ ಎಂದು ಕೇಳುತ್ತಿದ್ದಾರೆ. ಅಂತಹ ಸುದ್ದಿಗಳನ್ನು ತಡೆಯುವಲ್ಲಿ ನಮ್ಮ ಜವಾಬ್ದಾರಿ ಏನು ಎಂದು ಪ್ರಶ್ನಿಸುತ್ತಿದ್ದಾರೆ. ಇದು ಪ್ರಮುಖ ಪ್ರಶ್ನೆಗಳಾಗಿದ್ದು, ಅದನ್ನು ಗಂಭೀರವಾಗಿ ಸರಿಪಡಿಸಲು ಪ್ರಯತ್ನಿಸುತ್ತೇನೆ. ನಮಗೆ ತಿಳಿದಿದ್ದನ್ನು ಇಲ್ಲಿ ವಿವರಿಸುವ ಪ್ರಯತ್ನ ಮಾಡುತ್ತೇನೆ.
ನಮ್ಮಲ್ಲಿ ಪ್ರಕಟವಾಗುವ ಸುದ್ದಿಗಳನ್ನು ಶೇ.99ರಷ್ಟು ಮಂದಿ ಅಧಿಕೃತ ಎಂದು ನಂಬುತ್ತಾರೆ. ಕೆಲವಷ್ಟೇ ಸುದ್ದಿಗಳು ಸುಳ್ಳಾಗಿರುತ್ತವೆ. ಆದರೆ ಇವೆಲ್ಲವೂ ಒಂದು ನಿರ್ಧಿಷ್ಟ ವಲಯಕ್ಕೆ ಸಂಬಂಧಿಸಿದವಲ್ಲ ಅಥವಾ ರಾಜಕೀಯಕ್ಕೆ ಸಂಬಂಧಿಸಿದ್ದಷ್ಟೆಯೂ ಅಲ್ಲ. ಒಟ್ಟಾರೆಯಾಗಿ ಇಂತಹ ಸುದ್ದಿಗಳಿಂದ ಫಲಿತಾಂಶದ ದಿಕ್ಕು ಬದಲಾಗುವ ಸಾಧ್ಯತೆ ಇಲ್ಲ.
ಯಾವುದೇ ವದಂತಿಗಳು ಫೇಸ್ಬುಕ್ ನಲ್ಲಿ ಬರಬಾರದು ಎನ್ನುವುದು ನಮ್ಮ ಆಶಯ. ಜನರು ಹೆಚ್ಚು ಅರ್ಥಪೂರ್ಣವಾದ್ದನ್ನು ಅವರಿಗೆ ತೋರಿಸುವ ನಿಖರ ಸುದ್ದಿಗಳನ್ನು ಪಡೆಯುವಂತೆ ಮಾಡುವುದು ನಮ್ಮ ಗುರಿ. ಇಂಥ ಸುಳ್ಳುಸುದ್ದಿಗಳನ್ನು ನಿರ್ಮೂಲನೆಗೊಳಿಸಲು ಕ್ರಮ ಆರಂಭಿಸಿದ್ದೇವೆ. ಈ ನಿರಂತರ ಪ್ರಕ್ರಿಯೆಯಲ್ಲಿ ಸುಧಾರಣೆಯೂ ಆಗುತ್ತಿದೆ.
ವಾಸ್ತವವಾಗಿ ಸತ್ಯವನ್ನು ಪತ್ತೆ ಮಾಡುವುದು ಸಂಕೀರ್ಣ ಪ್ರಕ್ರಿಯೆ. ಕೆಲವೊಮ್ಮೆ ಮೂಲ ಸರಿಯಾಗಿದ್ದರೂ, ತಪ್ಪು ಅಂಶಗಳು ಅದರಲ್ಲಿ ನುಸುಳಬಹುದು. ಕೆಲವೊಮ್ಮೆ ಸತ್ಯವನ್ನು ಬಹಳಷ್ಟು ಮಂದಿ ಒಪ್ಪಿಕೊಳ್ಳದೆಯೂ ಇರಬಹುದು. ಆದರೆ ನಮ್ಮ ಸಮುದಾಯಕ್ಕೆ ಯಾವ ಅಂಶ ಹೆಚ್ಚು ಅರ್ಥಪೂರ್ಣ ಎಂದು ನಾವು ಖಚಿತವಾಗಿ ಹೇಳಬಹುದು. ಆದರೆ ಸುದ್ದಿಗಳ ಸತ್ಯಕ್ಕೆ ಧಕ್ಕೆ ತರುವವರ ಬಗ್ಗೆ ನಾವು ಹೆಚ್ಚು ಎಚ್ಚರಿಕೆಯಿಂದ ಇರಬೇಕಾಗುತ್ತದೆ ಎಂದು ವಿವರ ನೀಡಿದ್ದಾರೆ.







