ಉಡುಪಿ: ಕಾರು ಹರಿದು ತಾಯಿ ಮಗು ಸಾವು
ಉಡುಪಿ ಪಾಂಗಳದಲ್ಲಿ ನಡೆದ ಘಟನೆ

ಉಡುಪಿ, ನ.13: ಬಸ್ಸಿಗಾಗಿ ಕಾಯುತ್ತಿದ್ದವರ ಮೇಲೆ ಕಾರೊಂದು ಹರಿದು ತಾಯಿ ಹಾಗೂ ಮಗು ಸಾವನ್ನಪ್ಪಿದ ಘಟನೆ ಉಡುಪಿಯ ಪಾಂಗಳ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ.
ಪುಷ್ಪಲತಾ (36) ತಕ್ಷಿ (3) ಎಂಬವರು ಮೃತಪಟ್ಟವರು.
ತಮ್ಮ ಮನೆ ಇನ್ನಂಜೆಯಿಂದ ಉಡುಪಿಗೆ ಹೋಗಲು ಬಸ್ ಕಾಯುತ್ತಿದ್ದ ವೇಳೆ ಕೇರಳದ ಮಾರುತಿ ಸ್ವಿಫ್ಟ್ ಕಾರೊಂದು ತಾಯಿ ಹಾಗೂ ಮಗು ಮೇಲೆ ಹರಿದಿದೆ. ಪರಿಣಾಮ ಗಂಭೀರ ಗಾಯಗೊಂಡ ಇವರನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾರೆ.
ಪ್ರಕರಣ ಕಾಪು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದು, ಚಾಲಕನ ಅತಿ ವೇಗವೇ ಈ ಅಪಘಾತಕ್ಕೆ ಕಾರಣ ಎಂದು ತಿಳಿದು ಬಂದಿದೆ.
Next Story





