ಬೆಳಗಾವಿಗೆ ಪ್ರಧಾನಿ ಮೋದಿ ಆಗಮನ

ಪಣಜಿ/ಬೆಳಗಾವಿ, ನ.13: ಕೆಎಲ್‌ಇ ಸಂಸ್ಥೆಯ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕುಂದಾನಗರಿಗೆ ರವಿವಾರ ಆಗಮಿಸಿದ್ದಾರೆ.
ಗೋವಾದಿಂದ ವಿಶೇಷ ಹೆಲಿಕಾಪ್ಟರ್‌ನಲ್ಲಿ ಬೆಳಗಾವಿಯ ನೆಹರೂ ಹೆಲಿಪ್ಯಾಡ್‌ಗೆ ಪ್ರಧಾನಿ ಬಂದಿಳಿದರು. ಬೆಳಗಾವಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಲಿದ್ದಾರೆ.
‘‘ನಿಮ್ಮ ವಿಶ್ವಾಸ ಉಳಿಸಿಕೊಳ್ಳುವ ಕೆಲಸ ಮಾಡುವೆ. ನಿಮ್ಮಿಂದ ಕೇವಲ 50 ದಿನಗಳ ಅವಕಾಶ ಕೇಳಿದ್ದೇನೆ. ನಾನು ಕೆಲಸ ಮಾಡದಿದ್ದರೆ ನನಗೆ ಶಿಕ್ಷೆ ಕೊಡಿ. ನಾನು ಉನ್ನತ ಹುದ್ದೆಯಲ್ಲಿರುವ ಕುಟುಂಬದಲ್ಲಿ ಹುಟ್ಟಿಲ್ಲ. ಬಡ ಕುಟುಂಬದಲ್ಲಿ ಜನಿಸಿದ್ದು, ಬಡವರ ಸಂಕಷ್ಟ ಗೊತ್ತಿದೆ. ಇನ್ನು ಮುಂದೆ ಬೇನಾಮಿ ಆಸ್ತಿ ಮಾಡುವವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು’’ ಎಂದು 500 ಹಾಗೂ 1000 ರೂ.ನೋಟನ್ನು ನಿಷೇಧಿಸಿರುವ ಬಗ್ಗೆ ಟೀಕೆ ಮಾಡುತ್ತಿರುವ ಕಾಂಗ್ರೆಸ್ ನಾಯಕರ ವಿರುದ್ಧ ಮೋದಿ ಪರೋಕ್ಷ ವಾಗ್ದಾಳಿ ನಡೆಸಿದರು.
Next Story





