ನಕಲಿ ನೋಟುಗಳ ಠೇವಣಿಗೆ ಯತ್ನ:ಮಹಿಳೆ ಸೆರೆ

ಮಲಪ್ಪುರಂ,ನ.13: ಮಲಪ್ಪುರಂ ಜಿಲ್ಲೆಯ ಕಂಡೊಟ್ಟಿಯ ಎಸ್‌ಬಿಐ ಶಾಖೆಯಲ್ಲಿ ನಕಲಿ ನೋಟುಗಳನ್ನು ಠೇವಣಿಯಿರಿಸಲು ಪ್ರಯತ್ನಿಸಿದ್ದ 65ರ ಹರೆಯದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಆಕೆಯ ಬಳಿಯಿದ್ದ 37,000 ರೂ.ಮುಖಬೆಲೆಯ ನಕಲಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ.
ನಿನ್ನೆ ಬ್ಯಾಂಕಿನ ತನ್ನ ಉಳಿತಾಯ ಖಾತೆಯಲ್ಲಿ ಹಳೆಯ ನೋಟುಗಳನ್ನು ಜಮಾ ಮಾಡಲು ಬಂದಿದ್ದ ಮರಿಯಮ್ಮ ಸಿಬ್ಬಂದಿಗೆ 49,500 ರೂ.ಗಳನ್ನು ನೀಡಿದ್ದಳು. ಸಿಬ್ಬಂದಿ ಪರಿಶೀಲಿಸಿದಾಗ ಅವುಗಳ ಪೈಕಿ 37,000 ರೂ.ಮುಖಬೆಲೆಯ 1,000 ರೂ.ನ 37 ನಕಲಿ ನೋಟುಗಳು ಪತ್ತೆಯಾಗಿದ್ದವು.
ಬ್ಯಾಂಕ್ ಅಧಿಕಾರಿಗಳು ನೀಡಿದ ಮಾಹಿತಿಯ ಮೇರೆಗೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಮರಿಯಮ್ಮನನ್ನು ವಿಚಾರಣೆಗೊಳಪಡಿಸಿದಾಗ ಕೊಲ್ಲಿ ರಾಷ್ಟ್ರದಲ್ಲಿರುವ ತನ್ನ ಮಕ್ಕಳು ಈ ಹಣವನ್ನು ಕಳುಹಿಸಿದ್ದಾಗಿ ಹೇಳಿಕೊಂಡಿದ್ದಾಳೆ.
ಬ್ಯಾಂಕ್ ಮ್ಯಾನೇಜರ್ ನೀಡಿದ ದೂರಿನ ಮೇರೆಗೆ ಪೊಲೀಸರು ಮರಿಯಮ್ಮನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, 15 ದಿನಗಳ ನ್ಯಾಯಂಗ ಬಂಧನ ವಿಧಿಸಲಾಗಿದೆ.
Next Story





