ಕಳವಳ ಬೇಡ,ಸಾಕಷ್ಟು ನಗದು ಲಭ್ಯವಿದೆ: ಆರ್‌ಬಿಐ

ಮುಂಬೈ,ನ.13: ಬ್ಯಾಂಕುಗಳಲ್ಲಿ ಸಾಕಷ್ಟು ನಗದು ಹಣ ಲಭ್ಯವಿದೆ ಮತ್ತು ಜನರು ಕಳವಳಪಡುವ ಅಗತ್ಯವಿಲ್ಲ ಹಾಗೂ ಹೊಸನೋಟುಗಳನ್ನು ಸಂಗ್ರಹಿಸಲು ಪದೇಪದೇ ಎಟಿಎಂ ಮತ್ತು ಬ್ಯಾಂಕುಗಳಿಗೆ ಎಡತಾಕಬೇಕಿಲ್ಲ ಎಂದು ಭಾರತೀಯ ರಿಜರ್ವ್ ಬ್ಯಾಂಕ್ ರವಿವಾರ ಸ್ಪಷ್ಟಪಡಿಸಿದೆ.
ರಿಜರ್ವ್ ಬ್ಯಾಂಕ್ ಮತ್ತು ಇತರ ಬ್ಯಾಂಕುಗಳಲ್ಲಿ ಸಣ್ಣ ಮುಖಬೆಲೆಯ ನೋಟುಗಳು ಸಹ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿವೆ ಎಂದು ಆರ್‌ಬಿಐ ಹೇಳಿಕೆಯಲ್ಲಿ ತಿಳಿಸಿದೆ.
ದೇಶದ ಕೆಲವು ಭಾಗಗಳಲ್ಲಿ ಸೋಮವಾರ ಬ್ಯಾಂಕುಗಳಿಗೆ ರಜೆಯಿರುವುದರಿಂದ ಹೆಚ್ಚಿನ ಎಟಿಎಂಗಳು ಹಣವಿಲ್ಲದೆ ಬಾಗಿಲೆಳೆದುಕೊಂಡಿದ್ದರಿಂದ ಹತಾಶ ಜನರು ರವಿವಾರ ಬ್ಯಾಂಕುಗಳಿಗೆ ಲಗ್ಗೆ ಹಾಕಿದ್ದರು.
ಅನಾಣ್ಯೀಕರಣದ ಘೋಣೆ ಹೊರಬಿದ್ದ ಐದು ದಿನಗಳ ಬಳಿಕ ಶೇ.60ರಷ್ಟು ಎಟಿಎಂಗಳಲ್ಲಿ ಮಾತ್ರ ಹಣ ಲಭ್ಯವಾಗಿತ್ತಾದರೂ ಕೆಲವೇ ಗಂಟೆಗಳಲ್ಲಿ ಹಣ ಖಾಲಿಯಾಗಿತ್ತು.
Next Story





