ಹತ್ಯೆಗೀಡಾದ ಮುಸ್ತಫಾ ಮನೆಗೆ ಸಚಿವ ಯು.ಟಿ.ಖಾದರ್ ಭೇಟಿ

ಮಂಗಳೂರು, ನ.13: ಇತ್ತೀಚೆಗೆ ಮೈಸೂರು ಜೈಲಿನಲ್ಲಿ ಹತ್ಯೆಗೀಡಾದ ವಿಚಾರಣಾಧೀನ ಕೈದಿ ಕಾವೂರು ಮುಸ್ತಫಾ ಮನೆಗೆ ತೆರಳಿದ ರಾಜ್ಯ ಆಹಾರ ಸಚಿವರಾದ ಯು.ಟಿ.ಖಾದರ್ ಮುಸ್ತಫಾ ಕುಟುಂಬಿಕರಿಗೆ ಸಾಂತ್ವನ ಹೇಳಿದರು.
ಈ ಕುರಿತು ಸಮಗ್ರ ತನಿಖೆಗೆ ಕಮಿಷನರ್ ನೇತೃತ್ವದ ತಂಡ ರಚಿಸಿದ್ದು, ತಾನು ಸ್ವತಃ ಗೃಹ ಸಚಿವರಲ್ಲಿ ಮಾತುಕತೆ ನಡೆಸಿ ಕುಟುಂಬಕ್ಕೆ ನ್ಯಾಯ ಒದಗಿಸಲು ಪ್ರಯತ್ನಿಸುವುದಾಗಿ ಆಹಾರ ಸಚಿವರಾದ ಯು.ಟಿ.ಖಾದರ್ ತಿಳಿಸಿದರು.
ಸಚಿವರ ಜೊತೆ ಸ್ಥಳೀಯ ಮಸೀದಿ ಅಧ್ಯಕ್ಷರು ಹಾಗೂ ಕಾಂಗ್ರೆಸ್ ಮುಖಂಡರಾದ ಮಹಮ್ಮದಲಿ, ದ.ಕ. ಜಿಲ್ಲಾ ಯುವಕಾಂಗ್ರೆಸ್ ನ ಸುಹೈಲ್ ಕಂದಕ್, ಸ್ಥಳೀಯ ಕಾಂಗ್ರೆಸ್, ಯುವ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಉಪಸ್ಥಿತರಿದ್ದರು.
Next Story





