ನೋಟು ರದ್ದತಿ ಕುರಿತು ಮಾತನಾಡುವಾಗ ಜಪಾನಿನಲ್ಲಿ ನಕ್ಕ ಪ್ರಧಾನಿ ಮೋದಿ ಭಾರತದಲ್ಲಿ ಗದ್ಗದಿತರಾದರು!
ವೀಡಿಯೊಗಳು ಇಲ್ಲಿವೆ....ನೋಡಿ

500, 1,000 ರೂ.ನೋಟುಗಳನ್ನು ನಿಷೇಧಿಸಿರುವ ಸರಕಾರದ ಕ್ರಮದ ಅತ್ಯಂತ ದೊಡ್ಡ ಬಲಿಪಶುಗಳೆಂದರೆ ಸಾಮಾನ್ಯ ಜನರು ಎಂದು ಭಾವಿಸಲು ನೀವು ಇಷ್ಟ ಪಡಬಹುದು, ಹಾಗಿದ್ದರೆ ನೀವು ತಪ್ಪು ಮಾಡುತ್ತಿದ್ದೀರಿ.
ಗೋವಾದ ಮೋಪಾದಲ್ಲಿಂದು ನೂತನ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದ ಬಳಿಕ ಮಾತನಾಡುತ್ತಿದ್ದ ಅವರು, ಕಪ್ಪುಹಣದ ನಿರ್ಮೂಲನೆಗಾಗಿ ತಾನು ಕೈಗೊಂಡ ಕ್ರಮದಿಂದ ತನ್ನ ರಾಜಕೀಯ ವೃತ್ತಿಜೀವನದ ಮೇಲೆ ಸಂಭಾವ್ಯ ಪರಿಣಾಮಗಳ ದಯನೀಯ ಸ್ಥಿತಿಯನ್ನು ಮುಂದಿಟ್ಟರು.
‘‘ನನ್ನ ವಿರುದ್ಧ ಹೊಂಚು ಹಾಕುತ್ತಿರುವ ಶಕ್ತಿಗಳ ಬಗ್ಗೆ ನನಗೆ ಗೊತ್ತು. ಅವರು ನನ್ನನ್ನು ಬದುಕಲು ಬಿಡದಿರಬಹುದು. ಅವರು 70 ವರ್ಷಗಳ ಕಾಲ ದೋಚಿದ್ದು ಈಗ ತೊಂದರೆಗೆ ಸಿಲುಕಿದೆ, ಹೀಗಾಗಿ ಅವರು ನನ್ನನ್ನು ನಾಶ ಮಾಡಬಹುದು. ಆದರೆ ಅದಕ್ಕೆ ನಾನು ಸಿದ್ಧನಾಗಿದ್ದೇನೆ ’’ ಎಂದು ಮೋದಿ ಭಾಷಣದಲ್ಲಿ ಹೇಳಿಕೊಂಡರು.
ನೋಟು ನಿಷೇಧದ ಬಳಿಕ ಸೃಷ್ಟಿಯಾಗಿರುವ ಅವ್ಯವಸ್ಥೆಯ ಕುರಿತು ಟೀಕಿಸಿದ್ದಕ್ಕಾಗಿ ಪ್ರತಿಪಕ್ಷಗಳನ್ನು ಕುಟುಕಿದ ಅವರು,‘‘ಈ ಕ್ರಮ ನನಗೆ ಮಾರಕವಾಗಬಹುದು ಎನ್ನುವುದು ನನಗೆ ಚೆನ್ನಾಗಿ ತಿಳಿದಿದೆ ’’ಎಂದು ಹೇಳಿದರು.
ಭಾಷಣದ ಒಂದು ಹಂತದಲ್ಲಿ ದೇಶಸೇವೆಗಾಗಿ ತಾನು ಮಾಡಿರುವ ತ್ಯಾಗಗಳ ಬಗ್ಗೆ ಹೇಳುವಾಗ ಒಂದು ಗಳಿಗೆ ಗದ್ಗದಿತರಾದಂತೆ ಕಂಡು ಬಂದ ಮೋದಿ ‘‘ನಾನು ಪ್ರಧಾನಿ ಹುದ್ದೆಯಲ್ಲಿ ಕುಳಿತುಕೊಳ್ಳಲೆಂದೇ ಜನಿಸಿದವನಲ್ಲ. ನಾನೇನನ್ನು ಹೊಂದಿದ್ದೇನೋ,ನನ್ನ ಕುಟುಂಬ,ನನ್ನ ಮನೆ......ಎಲ್ಲವನ್ನೂ ದೇಶಕ್ಕಾಗಿ ತೊರೆದಿದ್ದೇನೆ ’’ ಎಂದರು. ಈ ಭಾಷಣಕ್ಕೆ ಕೆಲವೇ ಗಂಟೆಗಳ ಮುನ್ನ ಮೋದಿಯವರು ಜಪಾನಿನಲ್ಲಿ ಮಾಡಿದ್ದ ಇನ್ನೊಂದು ಭಾಷಣದ ವೀಡಿಯೊ ವಿಕ್ಷಿಸಿದವರಿಗೆ ಅವರ ಈ ಭಾಷಣ ಆಘಾತವನ್ನುಂಟು ಮಾಡಿರಬಹುದು. ಮೊದಲಿನ ಭಾಷಣದ ವೀಡಿಯೊದಲ್ಲಿ ನಗದು ಹಣದ ಕೊರತೆಯ ಈ ಪರಿಸ್ಥಿತಿಯಲ್ಲಿ ಕುಟುಂಬದಲ್ಲಿ ಮದುವೆಯಂತಹ ವಿಷಯಗಳ ಕುರಿತು ಭಾರತೀಯರ ಚಿಂತೆಗಳ ಬಗ್ಗೆ ಇದೇ ಮೋದಿ ಗಹಗಹಿಸಿ ನಕ್ಕಿದ್ದರು.
ಘರ್ ಮೆ ಶಾದಿ ಹೈ,ಪೈಸೆ ನಹೀಂ ಹೈ.. ಹ ಹ ಹಾ ಎಂದು ಅವರು ಭಾರತೀಯರ ಸಂಕಷ್ಟಗಳ ಬಗ್ಗೆ ನಗೆಯಾಡಿದ್ದರು. ಜಪಾನಿನಲ್ಲಿಯ ವೀಡಿಯೊವನ್ನು ವೀಕ್ಷಿಸಿ...ಗೋವಾ ಭಾಷಣದ ವಿಡಿಯೋವನ್ನೂ ವೀಕ್ಷಿಸಿ. ಹೀಗೂ ಉಂಟೇ ಎಂದು ನಿಮಗನ್ನಿಸದಿದ್ದರೆ ಹೇಳಿ!
ಅಲ್ಲಿ
गरीब त्रस्त मोदी मस्त! pic.twitter.com/yilvVqjcjR
— INC India (@INCIndia) November 13, 2016
ಇಲ್ಲಿ
First laughter now tears! Mediocrity comes face to face with reality pic.twitter.com/2Dcs0mtk1k
— Office of RG (@OfficeOfRG) November 13, 2016







