ಸುಳ್ಯ: ರೋಟರಿ ಶಾಲೆಯಲ್ಲಿ ಬಣ್ಣದ ಲೋಕದ ಅನಾವರಣ

ಸುಳ್ಯ, ನ.13: ಮಕ್ಕಳ ದಿನಾಚರಣೆಯ ಪ್ರಯುಕ್ತ ಸುಳ್ಯ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆ ವರ್ಣ ಚಿತ್ತಾರ-2016 ಹಾಗೂ ಚಿತ್ರಕಲಾ ಪ್ರದರ್ಶನ ರವಿವಾರ ರೋಟರಿ ಪ್ರಾಥಮಿಕ ಶಾಲಾ ಸಭಾಭವನದಲ್ಲಿ ನಡೆಯಿತು.
ಕ್ರಿಯೇಟಿವ್ ಸ್ಕೂಲ್ ಆಫ್ ಆರ್ಟ್ಸ್ ಸುಳ್ಯ, ಇಂಟರ್ಯಾಕ್ಟ್ ಕ್ಲಬ್, ರೋಟರಿ ಶಾಲೆ ಸುಳ್ಯ ಮತ್ತು ಸುದ್ದಿ ಬಿಡುಗಡೆ ಪತ್ರಿಕೆ ಹಾಗೂ ಸುದ್ದಿ ಚಾನೆಲ್ ಸಹಯೋಗದೊಂದಿಗೆ ನಡೆದ ಕಾರ್ಯಕ್ರಮವನ್ನು ಶಿಕ್ಷಣ ಸಂಯೋಜಕ ಡಾ.ಸುಂದರ ಕೇನಾಜೆ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ರೋಟರಿ ಕ್ಲಬ್ ಅಧ್ಯಕ್ಷ ಗಿರಿಜಾ ಶಂಕರ್ ಟಿ., ಶ್ರೀನಿವಾಸ, ಅಚ್ಯುತ ಅಟ್ಲೂರು ಉಪಸ್ಥಿತರಿದ್ದರು. ಮದ್ಯಾಹ್ನ ಕ್ರಿಯೇಟಿವ್ ಸ್ಕೂಲ್ ಆಫ್ ಆರ್ಟ್ಸ್‌ನ ವಿದ್ಯಾರ್ಥಿಗಳಿಂದ ಗಾನ-ಕುಂಚ ಕಾರ್ಯಕ್ರಮ ನಡೆಯಿತು. ಬಳಿಕ ನಡೆದ ಸಮಾರೋಪ ಕಾರ್ಯಕ್ರಮದಲ್ಲಿ , ಸುದ್ದಿ ಸಮೂಹ ಸಂಸ್ಥೆಗಳ ಮಾಲಕ ಡಾ. ಯು.ಪಿ.ಶಿವಾನಂದ ಬಹುಮಾನ ವಿತರಿಸಿ ಮಾತನಾಡಿದರು.
ಪ್ರಸಿದ್ಧ ಚಿತ್ರಕಲಾವಿದ ಮೋಹನ್ ಸೋನಾ, ಚಿತ್ರಕಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಮಹಾಬಲ ಕುಳ, ರೋಟರಿ ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಜಯಲಕ್ಷ್ಮೀ ಕೆ.ವಿ, ಪ್ರೌಢಶಾಲಾ ಮುಖ್ಯೋಪಾಧ್ಯಾಯ ಅಚ್ಚುತ ಅಟ್ಲೂರು ಅತಿಥಿಗಳಾಗಿ ಮಾತನಾಡಿದರು.
ಇಂಟರ್ಯಾಕ್ಟ್ ಕ್ಲಬ್‌ನ ಅಧ್ಯಕ್ಷೆ ದೀಪ್ತಿ ಡಿ. ವಂದಿಸಿದರು. ಕ್ರಿಯೇಟಿವ್ ಸ್ಕೂಲ್ ಆಫ್ ಆರ್ಟ್ಸ್‌ನ ಶ್ರೀಹರಿ ಪೈಂದೊಡಿ, ಪ್ರಸನ್ನ ಐವರ್ನಾಡು ಉಪಸ್ಥಿತರಿದ್ದರು.





