ಆಸ್ಟ್ರೇಲಿಯ-ದಕ್ಷಿಣ ಆಫ್ರಿಕ 2ನೆ ದಿನದಾಟ ಮಳೆಗಾಹುತಿ
ಹೊಬರ್ಟ್, ನ.13: ಭಾರೀ ಮಳೆಯಿಂದಾಗಿ ಆಸ್ಟ್ರೇಲಿಯ ಹಾಗೂ ದಕ್ಷಿಣ ಆಫ್ರಿಕ ನಡುವೆ ಇಲ್ಲಿ ರವಿವಾರ ನಡೆಯಬೇಕಾಗಿದ್ದ ಎರಡನೆ ಟೆಸ್ಟ್‌ನ 2ನೆ ದಿನದಾಟ ಒಂದು ಎಸೆತ ಕಾಣದೇ ರದ್ದುಗೊಂಡಿದೆ.
ದಕ್ಷಿಣ ಆಫ್ರಿಕ ಮೊದಲ ದಿನದಾಟದಂತ್ಯಕ್ಕೆ 5 ವಿಕೆಟ್ ನಷ್ಟಕ್ಕೆ 171 ರನ್ ಗಳಿಸಿತ್ತು. ಟೆಂಬಾ ಬವುಮಾ(38) ಹಾಗೂ ಕ್ವಿಂಟನ್ ಡಿಕಾಕ್(28) ಕ್ರೀಸ್‌ನಲ್ಲಿದ್ದರು. ಮೊದಲ ದಿನದಾಟದಲ್ಲಿ ಆಸ್ಟ್ರೇಲಿಯವನ್ನು ಕೇವಲ 87 ರನ್‌ಗೆ ಆಲೌಟ್ ಮಾಡಿದ್ದ ಆಫ್ರಿಕನ್ನರು 86 ರನ್ ಮುನ್ನಡೆಯಲ್ಲಿದ್ದಾರೆ.
ಹವಾಮಾನ ಇಲಾಖೆಯ ಪ್ರಕಾರ ಮೂರನೆ ದಿನದಾಟದಲ್ಲಿ ಸ್ವಲ್ಪ ಮಳೆ ಸುರಿಯಬಹುದು. 4ನೆ ಹಾಗೂ 5ನೆ ದಿನದಾಟದಲ್ಲಿ ಮಳೆ ಬೀಳುವ ಸಾಧ್ಯತೆಯಿಲ್ಲ.
ಉಳಿದ ದಿನಗಳಲ್ಲಿ ಅರ್ಧಗಂಟೆ ಮುಂಚಿತವಾಗಿ ಪಂದ್ಯ ಆರಂಭವಾಗಲಿದೆ.
Next Story





